ಡಾ. ರಾ.ಯ. ಧಾರವಾಡಕರ `ಸಾಹಿತ್ಯದ ಸಾರ್ವಭೌಮ'

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾ.ಯ. ಧಾರವಾಡಕರ ಸಂಸ್ಮರಣೆ ದತ್ತಿ ಕಾರ್ಯಕ್ರಮ ಜರುಗಿತು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾ.ಯ. ಧಾರವಾಡಕರ ಸಂಸ್ಮರಣೆ ದತ್ತಿ ಕಾರ್ಯಕ್ರಮ ಜರುಗಿತು.
Published on
ಧಾರವಾಡ: ಕನ್ನಡ ಸಾಂಸ್ಕೃತಿಕ ಲೋಕದಲ್ಲಿ `ರಾಯರೆಂದೇ' ಕರೆಸಿಕೊಂಡಿದ್ದ ಡಾ. ರಾ.ಯ. ಧಾರವಾಡಕರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಬಂಧ ಸಾಹಿತ್ಯದ ಸಾರ್ವಭೌಮರೆಂದೇ ಪ್ರಖ್ಯಾತಿ ಪಡೆದಿದ್ದಾರೆ ಎಂದು ಧಾರವಾಡದ ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ರಾ.ಯ. ಧಾರವಾಡಕರ ಸಂಸ್ಮರಣೆ ದತ್ತಿ ಅಂಗವಾಗಿ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಡಾ. ರಾ.ಯ. ಧಾರವಾಡಕರ ಪ್ರಬಂಧ ಸಾಹಿತ್ಯ' ವಿಷಯ ಕುರಿತು ಉಪನ್ಯಾಸ ನೀಡಿದರು.
ಧಾರವಾಡಕರ ಅವರ ಆಸಕ್ತಿಯ ಕ್ಷೇತ್ರ ಪ್ರಬಂಧ ಸಾಹಿತ್ಯ ಜತೆಗೆ ಕಥಾ ರಚನೆಯಲ್ಲೂ ಸಿದ್ಧಹಸ್ತರಾಗಿದ್ದರು. ಅವರು ಬರೆದ ಕಥೆಗಳು ಓದುಗರಲ್ಲಿ ಭಾವನೆ ಅರಳಿಸುವಂತವುಗಳಾಗಿವೆ. ಅವರ ಪ್ರಬಂಧ ಸಾಹಿತ್ಯದ `ಧೂಮ್ರ ವಲಯಗಳು, ನವಿಲುಗರಿ, ಸೂರ್ಯಪಾನ' ಹೆಚ್ಚು ಪ್ರಸಿದ್ದಿ ಪಡೆದವುಗಳಾಗಿವೆ. ಇವರು ಶಾಂತಕವಿಗಳ ಮೂರು ಕೀರ್ತನೆಗಳನ್ನು ಬೆಳಕಿಗೆ ತಂದರು ಎಂದರು.
ಡಾ. ರಾ.ಯ. ಧಾರವಾಡಕರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯರಾಗಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿ ಅದರ ಉನ್ನತಿಗಾಗಿ ಶ್ರಮಿಸಿದರು. ಪ್ರಬಂಧ ಸಾಹಿತ್ಯದಲ್ಲಿ ಅವರಿಗಿದ್ದ ಅಪಾರ ಆಸಕ್ತಿ ಗಮನಿಸಿ, ಅವರ ಹುಟ್ಟಿದ ದಿನವಾದ ಜುಲೈ 15 ನ್ನು ಪ್ರಬಂಧ ದಿನ ಎಂದು ಆಚರಿಸಿ ಶಾಲಾ, ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಅವರ ಪ್ರಬಂಧ ಸಾಹಿತ್ಯದಲ್ಲಿ ಜೀವನದ ಸಮಗ್ರ ಚಿತ್ರಣವೇ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹ.ವೆಂ. ಕಾಖಂಡಕಿ ಮಾತನಾಡಿ, ಡಾ. ರಾ. ಯ. ಧಾರವಾಡಕರ ಅವರ ಪಾಠ ಬೋಧನೆ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಿತ್ತು. ಸಾಮಾನ್ಯ ವಿಷಯಗಳನ್ನು ಅರ್ಥಪೂರ್ಣವಾಗಿ ಹೇಳುವ ಕಲೆ ಅವರಲ್ಲಿತ್ತು. ಅವರ ಪಿಎಚ್‌ಡಿ ಪ್ರಬಂಧ `ಹೊಸಗನ್ನಡದ ಉದಯ ಕಾಲದಲ್ಲಿ'್ಲ ಉತ್ತರ ಕರ್ನಾಟಕದ ಕನ್ನಡದ ಗಟ್ಟಿತನ ಕಾಣಬಹುದು ಎಂದು ಹೇಳಿದರು.
ಅನಿಲ ಧಾರವಾಡಕರ ವೇದಿಕೆಯಲ್ಲಿದ್ದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ, ಸತೀಶ ತುರಮರಿ, ಸುಜಾತಾ ಧಾರವಾಡಕರ, ಎಂ.ಎA. ಚಿಕ್ಕಮಠ, ಸೋಮನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು. ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಪ್ರೊ. ಧನವಂತ ಹಾಜವಗೋಳ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net