ಕಾರ್ಯಕ್ರಮಕ್ಕೆ ಕರೆ ತರಲಾಗುತ್ತಿರುವ 13 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ಜತೆಗೆ ಆ ದಿನದ ಕೂಲಿಯನ್ನು ಕೂಡ ನೀಡಬೇಕು. ಇದು ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ಸರ್ಕಾರದಿಂದಲೇ ವೆಚ್ಚ ಭರಿಸಬೇಕೇ ಹೊರತು, ಮಂಡಳಿಯ ಒಂದು ರೂ. ಇದಕ್ಕೆ ವೆಚ್ಚ ಮಾಡಬಾರದು ಎಂದು ಒತ್ತಾಯಿಸಿದರು.