health ಆರೋಗ್ಯದ ವಿಷಯದಲ್ಲಿ ನಿರ್ಲಕ್ಷೃ ಬೇಡ

ಸಂಶಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ health ತಪಾಸಣೆ ಶಿಬಿರವನ್ನು  ಶಾಸಕ ಎಂ.ಆರ್. ಪಾಟೀಲ ಉದ್ಘಾಟಿಸಿದರು.
ಸಂಶಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ health ತಪಾಸಣೆ ಶಿಬಿರವನ್ನು ಶಾಸಕ ಎಂ.ಆರ್. ಪಾಟೀಲ ಉದ್ಘಾಟಿಸಿದರು.
Published on
ಸಂಶಿ: ಆರೋಗ್ಯದ health ವಿಷಯದಲ್ಲಿ ಅಲಕ್ಷ್ಯ ವಹಿಸದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆದು ಆರೋಗ್ಯವಂತರಾಗಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಗ್ರಾಮದ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿ ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಕೆಎಲ್‌ಇ ಸಂಸ್ಥೆಯ ಕಲಾ, ವಾಣಿಜ್ಯ, ವಿಜ್ಞಾನ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕೆಎಲ್‌ಇ ಸಂಸ್ಥೆ 325ಕ್ಕೂ ಅಧಿಕ ಶಿಕ್ಷಣ ಹಾಗೂ ಸೇವಾ ಸಂಸ್ಥೆಗಳ ಮೂಲಕ ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ. ಸಾರ್ವಜನಿಕರು ಉಚಿತ ಶಿಬಿರಗಳ ಸದುಪಯೋಗ ಪಡೆದು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.
ಜೆಜಿಎಂಎಂ ಆಸ್ಪತ್ರೆ ನಿರ್ದೇಶಕ ಎಂ.ಜಿ. ಹಿರೇಮಠ ಮಾತನಾಡಿ, ಗಬ್ಬೂರಿನಲ್ಲಿರುವ ನೂತನ ಆಸ್ಪತ್ರೆಯಲ್ಲಿ ವಿವಿಧ ರೀತಿಯ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಪ್ರತಿದಿನ ನೂರಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿದರು. ಶಿಬಿರದಲ್ಲಿ ವಿವಿಧ ವೈದ್ಯಕೀಯ ಸೇವೆಗಳನ್ನು ನೀಡಲು 25 ನುರಿತ ತಜ್ಞ ವೈದ್ಯರು ಆಗಮಿಸಿದ್ದರು.
1500 ಜನರಿಗೆ ಚಿಕಿತ್ಸೆ ಮತ್ತು ಉಚಿತ ಔಷಧ ವಿತರಿಸಲಾಯಿತು. ಡಾ.ಶಾರದಾ ಮೆಟಗುಡ್ಡ, ಡಾ. ಅರುಣಕುಮಾರ ಎಂ., ಆಡಳಿತ ಮಂಡಳಿಯ ನಿರ್ದೇಶಕ ಎಚ್.ಎನ್. ಪಾಟೀಲ, ಬಿ.ಬಿ. ಪಾಟೀಲ, ನಿವೃತ್ತ ಶಿಕ್ಷಕ ಎನ್.ಎಫ್. ನಧಾಪ, ಇತರರಿದ್ದರು. ಪ್ರಾಚಾರ್ಯ. ಪ್ರೊ.ರಮೇಶ ಅತ್ತಿಗೇರಿ ಸ್ವಾಗತಿಸಿದರು. ಸಿ.ಎಸ್. ಗುರಮಠ ನಿರೂಪಿಸಿದರು. ಜಿ.ಜೆ. ಕಟಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net