brain ಮಿದುಳು ಗಡ್ಡೆ ಬಗ್ಗೆ ಅಸಡ್ಡೆ ಬೇಡ

brain ವಿಶ್ವ ಮಿದುಳು ಗಡ್ಡೆ ದಿನದ ಅಂಗವಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಆಸ್ಪತ್ರೆಯ ಚೇರ್ಮನ್, ನರರೋಗ ತಜ್ಞ ಡಾ. ಕ್ರಾಂತಿಕಿರಣ ಉದ್ಘಾಟಿಸಿದರು.
brain ವಿಶ್ವ ಮಿದುಳು ಗಡ್ಡೆ ದಿನದ ಅಂಗವಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಆಸ್ಪತ್ರೆಯ ಚೇರ್ಮನ್, ನರರೋಗ ತಜ್ಞ ಡಾ. ಕ್ರಾಂತಿಕಿರಣ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ರೖೆನ್ ಟ್ಯೂಮರ್ ಡೇ ಕಾರ್ಯಕ್ರಮದಲ್ಲಿ ಡಾ. ಕ್ರಾಂತಿಕಿರಣ ಸಲಹೆ
  • ನಿರ್ಲಕ್ಷ ತೋರದೆ ಕೂಡಲೇ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಬೇಕು
  • ಮಿದುಳಿನ ಗಡ್ಡೆಯ ಮೊದಲ ಮುನ್ಸೂಚನೆ ತಲೆನೋವು.
ಹುಬ್ಬಳ್ಳಿ :
ವಿಶ್ವ ಮಿದುಳು ಗಡ್ಡೆ ದಿನ ಅಂಗವಾಗಿ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಮಿದುಳಿನ ಗಡ್ಡೆಯ ಮೊದಲ ಮುನ್ಸೂಚನೆ ತಲೆನೋವು. ಆದರೆ, ಬಹುತೇಕ ಜನ ಅದನ್ನು ಸಾಮಾನ್ಯ ತಲೆನೋವು ಎಂದು ಕಡೆಗಣಿಸುತ್ತಾರೆ. ನಮ್ಮಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಇಂತಹ ಉದಾಹರಣೆೆಗಳೇ ಹೆಚ್ಚಿವೆ ಎಂದು ತಿಳಿಸಿದರು.
ಮಿದುಳಿನ ರಕ್ತನಾಳಗಳು ಮತ್ತು ನರಗಳ ಮೇಲೆ ಒತ್ತಡ ಬೀಳುವುದರಿಂದ ತಲೆನೋವು ಉಂಟಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ ತೀವ್ರ ತಲೆ ನೋವು, ವಾಕರಿಕೆ ಮತ್ತು ವಾಂತಿ, ಮಾತು, ದೃಷ್ಟಿ ಅಥವಾ ಆಲಿಸುವಿಕೆಯಲ್ಲಿ ಆಸ್ಪಷ್ಟತೆ, ಇನ್ನಿತರ ರೋಗ ಲಕ್ಷಣ ಕಂಡು ಬಂದಲ್ಲಿ ಯಾವುದೇ ನಿರ್ಲಕ್ಷ ತೋರದೆ ಕೂಡಲೇ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.
ಮಿದುಳಿನ ಗಡ್ಡೆಗಳು ಯಾವುದೇ ವಯಸ್ಸಿನಲ್ಲೂ ಸಂಭವಿಸಬಹುದು. ಆದರೆ ಅವು 40 ರಿಂದ 70 ವರ್ಷ ವಯಸ್ಸಿನವರಲ್ಲಿ ಮತ್ತು 3 ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಅಧ್ಯಯನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 40 ಸಾವಿರ ಮಿದುಳು ಗಡ್ಡೆಯ ಹೊಸ ಪ್ರಕರಣಗಳು ದಾಖಲಾದರೆ, ಸರಾಸರಿ 24 ಸಾವಿರದಷ್ಟು ಮರಣ ಪ್ರಮಾಣ ದಾಖಲಾಗುತ್ತಿವೆ.
ಆದ್ದರಿಂದ ಮಿದುಳು ಗಡ್ಡೆ ಬಗ್ಗೆ ಯಾವುದೇ ಅಸಡ್ಡೆ ಮಾಡದೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ನರರೋಗ ತಜ್ಞರಾದ ಡಾ. ಇತಿ ಸಿಂಗ್ ಪಮಾರ್, ಡಾ. ನಿಖಿಲ್ ಡಗೆ, ಇತರ ವೈದ್ಯರಾದ ಡಾ. ಜಯಮೇಜಯ, ಡಾ. ಅಬ್ರಾರ್, ಡಾ. ಆದಿತ್ಯ, ಡಾ. ರೋಹಿತ್, ಹಿರಿಯರಾದ ಎಂ.ಕೆ. ನಾಯ್ಕರ, ಶುಶ್ರುಷಕರು, ಆಸ್ಪತ್ರೆಯ ಸಿಬ್ಬಂದಿ, ಮತ್ತಿತರರು, ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net