(donates) ಸಮಾಜ ಸೇವೆಯಿಂದ ಮನಸ್ಸು ಸಂತೃಪ್ತಿ

ಹುಬ್ಬಳ್ಳಿಯಲ್ಲಿ ಶನಿವಾರ (donates) ದಾನಿಗಳಾದ ಅಶೋಕ ಹೊಸಮಠ, ಅನ್ನಪೂರ್ಣ ಕಮ್ಮಾರ, ನಿರ್ಮಲಾ ಹೊಸಮಠ, ಉಮಾ ಹೊಸಮಠ, ರಾಜು ಕಮ್ಮಾರ ಅವರನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸನ್ಮಾನಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ (donates) ದಾನಿಗಳಾದ ಅಶೋಕ ಹೊಸಮಠ, ಅನ್ನಪೂರ್ಣ ಕಮ್ಮಾರ, ನಿರ್ಮಲಾ ಹೊಸಮಠ, ಉಮಾ ಹೊಸಮಠ, ರಾಜು ಕಮ್ಮಾರ ಅವರನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸನ್ಮಾನಿಸಿದರು.
Published on
ಹುಬ್ಬಳ್ಳಿ: ಇಂದಿನ ಪೈಪೋಟಿ ಯುಗದಲ್ಲಿ ಮುಂದೆ ಸಾಗುವುದು (donates) ಕಷ್ಟದ ಸಂಗತಿ. ಆದರೆ, ಸಮಾಜ ಸೇವೆಯೊಂದಿಗೆ ಸಾಗಿದರೆ, ಮನಸ್ಸು ಸಂತೃಪ್ತಿಗೊಳ್ಳಲಿದೆ ಎಂದು ಮೂರುಸಾವಿರ ಮಠದ ಶ್ರೀಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿಯ ಮೂರುಸಾವಿರ ಮಠದಲ್ಲಿ ಶನಿವಾರ ವಿವಿಧ ಕ್ಷೇತ್ರದ ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜ ಸೇವಕರು ಹಾಗೂ ದಾನಿಗಳ ಬೆಂಬಲದಿಂದ ಸಮಾಜ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಆಶಿಸಿದರು.
ವಿವಿಧ ಕ್ಷೇತ್ರದ ಸಾಧಕರು ಹಾಗೂ ದಾನಿಗಳಾದ ಅಶೋಕ ಹೊಸಮಠ, ಅನ್ನಪೂರ್ಣ ಕಮ್ಮಾರ, ನಿರ್ಮಲಾ ಹೊಸಮಠ, ಉಮಾ ಹೊಸಮಠ, ರಾಜು ಕಮ್ಮಾರ ಅವರನ್ನು ಶ್ರೀಗಳು ಸನ್ಮಾನಿಸಿದರು.
ಅತಿಥಿಗಳಾದ ರೇಖಾ ಆಪ್ಟೆ, ರತ್ನಾ ಬಸಾಪುರ, ಸುವರ್ಣಾ ಹಾನಗಲ್, ರಾಜಶೇಖರ ಕರಕಣ್ಣವರ, ಅಮರೇಶ ಹಿಪ್ಪರಗಿ ಸಮಾರಂಭಕ್ಕೆ ಶುಭ ಕೋರಿದರು.
ಪೂಜಾ ಸೇವಾ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ ಸ್ವಾಗತಿಸಿದರು. ಎಸ್.ಎಸ್. ಕಮಡೊಳ್ಳಿಶೆಟ್ಟರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net