doctors society ವೈದ್ಯ ವೃತ್ತಿಯು ಮಾನವತೆಯ ಶ್ರೇಷ್ಠ ಸೇವೆ
doctors society ಹುಬ್ಬಳ್ಳಿಯ ಸನಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮೊಹಮ್ಮದ ಹುಸೇನ್ ಮಳಗಿ, ಡಾ. ಕೆ.ಎಫ್. ಕಮ್ಮಾರ, ಅಶ್ರಅಲಿ ಬಶೀರ್ ಅಹ್ಮದ, ಮೊಹಮ್ಮದ ಅಯೂಬ ಸವಣೂರ ಇತರರು ಇದ್ದರು.
ಹುಬ್ಬಳ್ಳಿ: doctors society ಇಲ್ಲಿಯ ಭೈರಿದೇವರಕೊಪ್ಪ ಶಾಂತಿನಿಕೇತನ ಕ್ಯಾಂಪಸ್ನಲ್ಲಿ ಸನಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು. ಹೊಸ ಫಿಸಿಯೋಥೆರಪಿ ಹೊರರೋಗಿ ವಿಭಾಗ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆಎಂಸಿಆರ್ಐ ನಿರ್ದೇಶಕ ಡಾ. ಕೆ.ಎಫ್. ಕಮ್ಮಾರ ಮಾತನಾಡಿ, ವೈದ್ಯಕಿಯ ವೃತ್ತಿಯು ಮಾನವತೆಗೆ ಸಲ್ಲಿಸುವ ಅತ್ಯಂತ ಶ್ರೇಷ್ಠ ಸೇವೆಗಳಲ್ಲಿ ಒಂದು. ವೈದ್ಯರನ್ನು ಗೌರವಿಸುವುದು ಮತ್ತು ಗುಣಮಟ್ಟದ ಆರೋಗ್ಯ ಶಿಕ್ಷಣವನ್ನು ಉತ್ತೇಜಿಸುವುದಕ್ಕಾಗಿ ಸನಾ ಗ್ರೂಪ್ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ವಿದ್ಯಾರ್ಥಿಗಳಿಗೆ ನೈತಿಕತೆ, ಕರುಣೆ ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಪಾಲಿಸುವುದರ ಮಹತ್ವವನ್ನು ವಿವರಿಸಿದರು.
ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹ್ಮದ್ ಮಾತನಾಡಿ, ಸಂಸ್ಥೆಯು ಆರೋಗ್ಯ ಶಿಕ್ಷಣವನ್ನು ಬಲಪಡಿಸುವುದು ಮತ್ತು ಸಮುದಾಯಕ್ಕಾಗಿ ಗುಣಮಟ್ಟದ ವೈದ್ಯಕಿಯ ಸೇವೆಗಳನ್ನು ವಿಸ್ತರಿಸುವುದಕ್ಕೆ ಬದ್ಧವಾಗಿದೆ ಎಂದರು.
ಆರೋಗ್ಯ ಸೇವೆ ಮತ್ತು ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿ ಹುಬ್ಬಳ್ಳಿ-ಧಾರವಾಡದ 22 ಗಣ್ಯ ವೈದ್ಯರನ್ನು ಸನ್ಮಾನಿಸಲಾಯಿತು.