ವಿಜಯಪುರ ಮಹಿಳಾ ವಿವಿಯ ಸಹಾಯಕ ಪ್ರಾಧ್ಯಾಪಕ ಸಂದೀಪ್‌‌ಗೆ ಡಾಕ್ಟರೇಟ್

ಸಹಾಯಕ ಪ್ರಾಧ್ಯಾಪಕ ಸಂದೀಪ್ ಅವರು ಧಾರವಾಡ ವಿವಿ ಗೆ ಮಂಡಿಸಿದ ಮಹಾ ಪ್ರಬಂಧ
ಸಹಾಯಕ ಪ್ರಾಧ್ಯಾಪಕ ಸಂದೀಪ್ ಅವರು ಧಾರವಾಡ ವಿವಿ ಗೆ ಮಂಡಿಸಿದ ಮಹಾ ಪ್ರಬಂಧ
Published on
ಧಾರವಾಡ: ಕರ್ನಾಟಕ ವಿಶ್ವವಿದ್ಯಾನಿಲಯವು ಸಂದೀಪ್ ಅವರು ಸಲ್ಲಿಸಿದ್ದ, ಕವರೇಜ್ ಆಫ್ ಸೈಬರ್ ಕ್ರೈಮ್: ಅ ಕಂಪಾರೇಟಿವ್ ಅನಾಲಿಸಿಸ್ ಎಮಂಗ್ ಕನ್ನಡ ಆಂಡ್ ಇಂಗ್ಲೀಷ್ ಡೈಲೀಸ್ ಕುರಿತ  ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ. ಸಂದೀಪ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಜೆ. ಎಂ. ಚಂದುನವರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ವಿವಿಯ ಕುಲಪತಿ ಪ್ರೊ. ಎ. ಎಂ ಖಾನ್, ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ವೈ. ಮಟ್ಟಿಹಾಳ, ವಿಭಾಗದ ಮುಖ್ಯಸ್ಥ ಪ್ರೊ. ಸಂಜಯಕುಮಾರ ಮಾಲಗತ್ತಿ ಅಭಿನಂದಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ. ಶೈಲಶ್ರೀ ಬಿ. ಬಾಹ್ಯ ಮೌಲ್ಯಮಾಪಕರಾಗಿ ಆಗಮಿಸಿದ್ದರು. ಪ್ರಸ್ತುತ ಸಂದೀಪ್ ಅವರು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net