DKS supporters ಕೇಶ್ವಾಪುರದಲ್ಲಿ ಬೆಂಬಲಿಗರ ವಿಜಯೋತ್ಸವ

DKS supporters ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಶನಿವಾರ ಕಾಂಗ್ರೆಸ್​ ಕಾರ್ಯಕರ್ತರು, ಡಿಕೆಶಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
DKS supporters ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಶನಿವಾರ ಕಾಂಗ್ರೆಸ್​ ಕಾರ್ಯಕರ್ತರು, ಡಿಕೆಶಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರ ರಚನೆಗೆ ಡಿಕೆಶಿ ಹಕ್ಕು ಮಂಡನೆ
  • ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ
ಹುಬ್ಬಳ್ಳಿ: DKS supporters ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಅಧಿಕಾರ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ನಗರದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಪರಸ್ಪರ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ಹಿರಿಯ ಮುಖಂಡ ಸತೀಶ ಮೆಹರವಾಡೆ ನೇತೃತ್ವದಲ್ಲಿ ಕೇಶ್ವಾಪುರ ಸವೋರ್ದಯ ಸರ್ಕಲ್​ ಬಳಿ ನೂರಾರು ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ ಮೆಹರವಾಡೆ, ಕಾಂಗ್ರೆಸ್​ ಕಟ್ಟಾಳು ಡಿ.ಕೆ. ಶಿವಕುಮಾರ ಅವರು ಎಲ್ಲ ಜಾತಿ, ಧರ್ಮದವರೊಂದಿಗೆ ಬೆರೆತು ನಡೆಯುವ ವ್ಯಕ್ತಿತ್ವ ಹೊಂದಿದ್ದಾರೆ. ಅವರು ದೈವಿಭಕ್ತರು ಎಂದರು.
ನಾಲ್ಕು ದಶಕದಿಂದ ಅವರೊಂದಿಗೆ ಇದ್ದೇನೆ. ಎಲ್ಲರನ್ನೂ ಬೆಳೆಸುವ ಗುಣ ಅವರಲ್ಲಿದೆ. ಹಾಗಾಗಿ ಕಾಂಗ್ರೆಸ್​ ಮತ್ತಷ್ಟು ಬಲಗೊಳ್ಳಲಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಇದರ ಜತೆಗೆ ಇನ್ನಷ್ಟು ಅನುಕೂಲಗಳನ್ನು ಜನರಿಗೆ ಮಾಡುವ ವಿಶ್ವಾಸವಿದೆ ಎಂದರು.
ಮುಖಂಡರಾದ ಪಿ.ಕೆ. ರಾಯನಗೌಡರ, ಅನಿಲ್​ ಪಾಟೀಲ, ಪ್ರಕಾಶ ಕುರಹಟ್ಟಿ, ಸುವರ್ಣ ಕಲ್ಲಕುಂಟ್ಲಾ, ಮಹೇಂದ್ರ ಸಿಂಘಿ, ಅನ್ವರ ಮುಧೋಳ, ರಾಜಶೇಖರ ಮೆಣಸಿನಕಾಯಿ, ಹೂವಪ್ಪ ದಾಯಗೋಡಿ, ವಿಶ್ವನಾಥ ಮೆಹರವಾಡೆ, ತಾರಾದೇವಿ ವಾಲಿ, ಪ್ರೇಮನಾಥ ಚಿಕ್ಕತುಂಬಳ, ಪೀರಾಜಿ ಖಂಡೇಕಾರ, ಗೀತಾ ಪಾಟೀಲ, ಗಿರಿಜಾ ಹೂಗಾರ, ಕಲಾವತಿ ದತ್ತವಾಡ, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net