ಅಂಗನವಾಡಿಗೆ ಹಾಲಿನ ಪುಡಿ ವಿತರಿಸಿ milk

milk ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
milk ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನಿರ್ದೇಶನ
  • ಗೃಹಲಕ್ಷ್ಮೀ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಹಣ ಬಂದಿಲ್ಲ
  • ಮಳೆಗಾಲದ ಒಳಗಾಗಿ ಮುಖ್ಯ ನಾಲಾ ಹಾಗೂ ಗಟಾರು ಸ್ವಚ್ಛಗೊಳಿಸಬೇಕು.
ಹುಬ್ಬಳ್ಳಿ :
ಇಲ್ಲಿಯ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಭಾಭವನದಲ್ಲಿ ಮಂಗಳವಾರ ಕರೆದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಈ ವಿಷಯಗಳನ್ನು ಪ್ರಸ್ತಾಪಿಸಿದರು.
ಕಳೆದ ಎರಡು ತಿಂಗಳಿಂದ ಅಂಗನವಾಡಿಗಳಿಗೆ ಹಾಲಿನಪುಡಿ ವಿತರಣೆ ಮಾಡದಿರುವ ಬಗ್ಗೆ ಉತ್ತರಿಸಲು ತಡಕಾಡಿದ ಸಿಡಿಪಿಒ ಸುನಿತಾ ಪಾಟೀಲ, ಹಿಂದುಳಿದ ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳಿಗೆ ಹಾಲಿನಪುಡಿ ಪಾಕೆಟ್​ಗಳನ್ನು ನೀಡಲಾಗಿದೆ. ಆದರೆ, ಹುಬ್ಬಳ್ಳಿ ನಗರ ತಾಲೂಕು ಅಭಿವೃದ್ಧಿ ಹೊಂದಿರುವುದರಿಂದ ಇದುವರೆಗೆ ಹಾಲಿನಪುಡಿ ಪಾಕೆಟ್​ಗಳು ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ಕಳೆದ ಜನವರಿಯಿಂದ ಗೃಹಲಕ್ಷ್ಮೀ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಧಿಕಾರಿ ಉತ್ತರದಿಂದ ಅಸಮಾಧಾನಗೊಂಡ ಶಾಸಕರು, ತಕ್ಷಣ ಹಾಲಿನ ಪುಡಿ ಪಾಕೆಟ್​ಗಳನ್ನು ವಿತರಿಸುವಂತೆ ನಿರ್ದೇಶನ ನೀಡಿದರು.
ಅಂತರ್ ಜಾತಿ ವಿವಾಹವಾಗುವ ಪ್ರತಿ ಜೋಡಿಗೆ ಪ್ರೋತ್ಸಾಹ ಧನವಾಗಿ 3 ಲಕ್ಷ ರೂ. ನೀಡಲಾಗುತ್ತದೆ. ಸೆಂಟ್ರಲ್ ಕ್ಷೇತ್ರದಲ್ಲಿ ಇದುವರೆಗೆ 2.52 ಕೋಟಿ ರೂ. ಪ್ರೋತ್ಸಾಹ ಧನ ನೀಡುವುದು ಬಾಕಿ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉತ್ತರಿಸಿದರು.
ಅರ್ಜಿ ನೀಡಿದ 7 ದಿನದೊಳಗೆ ಇ-ಸ್ವತ್ತು ನೀಡಬೇಕೆಂಬ ನಿಯಮವಿದ್ದರೂ ಹಣ ನೀಡಿದವರಿಗೆ ಮಾತ್ರ ಆದಷ್ಟು ಬೇಗ ಇ-ಸ್ವತ್ತು ನೀಡಲಾಗುತ್ತದೆಯೆಂದು ಜನರು ದೂರುತ್ತಿದ್ದಾರೆ ಎಂದು ಶಾಸಕರು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಂತ್ರಿಕ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಇ-ಸ್ವತ್ತು ನೀಡುವುದು ತಡವಾಗುತ್ತಿದೆ. ಇತ್ತೀಚೆಗೆ ಉಪ ನೋಂದಣಿ ಕಚೇರಿಗೂ ಭೇಟಿ ನೀಡಿ, ತಂತ್ರಜ್ಞಾನದ ಸಮಸ್ಯೆ ಬಗ್ಗೆ ರ್ಚಚಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ಮಳೆಗಾಲದ ಒಳಗಾಗಿ ಮುಖ್ಯ ನಾಲಾ ಹಾಗೂ ಗಟಾರು ಸ್ವಚ್ಛಗೊಳಿಸಬೇಕು. ಸಿಮೆಂಟ್ ರಸ್ತೆ ನಿರ್ವಿುಸುವ ಪ್ರದೇಶಗಳಲ್ಲಿ ಪ್ರತಿ ವಾರ್ಡ್​ನ ರೋಡ್ ಮ್ಯಾಪ್ ಸಿದ್ಧಗೊಳಿಸಬೇಕು. ಇದರಿಂದ ಯುಜಿಡಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಮಾಹಿತಿ ಸಿಗುತ್ತದೆ ಎಂದು ಸೂಚಿಸಿದರು.
ತಗ್ಗು ಪ್ರದೇಶ ಹಾಗೂ ಅಪಾರ್ಟ್​ವೆುಂಟ್​ಗಳಲ್ಲಿ ಮಳೆನೀರು ನುಗ್ಗುವ ಪ್ರದೇಶಗಳನ್ನು ಶೀಘ್ರ ಗುರುತಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.
ಇ-ಸ್ವತ್ತು ಅಭಿಯಾನ : ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್​ನಲ್ಲಿ ಇ-ಸ್ವತ್ತು ನೀಡುವ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಅಭಿಯಾನಕ್ಕೂ ಮುಂಚೆ ಇ-ಸ್ವತ್ತಿಗೆ ಬೇಕಾಗುವ ದಾಖಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಮೇ 18, 19 ಹಾಗೂ 20ರಂದು ಗೋಕುಲ ರಸ್ತೆ ಕೈಗಾರಿಕಾ ವಸಾಹತುವಿನಲ್ಲಿ ಇ-ಸ್ವತ್ತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ವಿಮಾನ ಹಾರಾಟ : ಸೆಂಟ್ರಲ್ ಕ್ಷೇತ್ರದ ಎರಡು ಶಾಲೆಯ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರೋಟರಿ ಕ್ಲಬ್ ಸಹಯೋಗದಲ್ಲಿ ವಿಮಾನ ಪ್ರಯಾಣದ ಮೂಲಕ ಬೆಂಗಳೂರು ವಿಧಾನಸೌಧ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಸುಧಾರಣಾ ಮಂಡಳಿ ಸದಸ್ಯರು ಆಯ್ಕೆ ಮಾಡಲಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಭೆಗೆ ತಿಳಿಸಿದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಿಸಿಪಿ ರವೀಶ, ತಹಸೀಲ್ದಾರ ಮಹೇಶ ಗಸ್ತೆ ಸೇರಿದಂತೆ ವಿವಿಧ ಇಲಾಖೆಗಳು ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net