new year ವಿಭಿನ್ನ ಶೈಲಿಯಲ್ಲಿ ಹೊಸ ವರ್ಷಾಚರಣೆ

new year ಹುಬ್ಬಳ್ಳಿಯಲ್ಲಿ ಸನಾತನ ಸೇವಾ ಸಂಘಟನ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಫ್ಯೂಷನ್​ ಭಕ್ತಿ ನ್ಯೂ ಇಯರ್​ ಉತ್ಸವ ಆಚರಿಸಲಾಯಿತು. ಗುರೂಜಿ ಆಶೀಶ್​ ವ್ಯಾಸ, ಜೀತೇಂದ್ರ ಮಜೇಥಿಯಾ, ಸುರೇಶ ಅಗರವಾಲ್​, ಅಶೋಕ ಗೋಯಲ್​, ಕಮಲ ಮೆಹತಾ, ಅನಿಲ ಮಿಸ್ಕಿನ್​, ದೂಧರಾಮಜಿ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಭಕ್ತಿ ಪ್ರವಚನ ಸಾಂಸ್ಕೃತಿಕ ಪ್ರದರ್ಶನ
ಹುಬ್ಬಳ್ಳಿ: new year ನಗರದಲ್ಲಿ ಹೊಸ ವರ್ಷವನ್ನು ಭಕ್ತಿ, ಪ್ರವಚನ ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಸಮಾಜ ನಿರ್ಮಾಣ ಹಾಗೂ ಸಂಸ್ಕೃತಿ ಸಂರಕ್ಷಣೆಯ ಉದ್ದೇಶದೊಂದಿಗೆ ಸನಾತನ ಸೇವಾ ಸಂಘಟನ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಫ್ಯೂಷನ್​ ಭಕ್ತಿ ನ್ಯೂ ಇಯರ್​ ಉತ್ಸವ ಆಯೋಜಿಸಲಾಗಿತ್ತು.
ಭಜನೆ, ಆಧ್ಯಾತ್ಮಿಕ ಪ್ರವಚನಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಸನಾತನ ಧರ್ಮದ ತತ್ವಗಳು, ಮಾನವೀಯ ಮೌಲ್ಯಗಳು, ಸಮಾಜದಲ್ಲಿ ಸೌಹಾರ್ದತೆ ಮತ್ತು ಏಕತೆಯ ಮಹತ್ವದ ಬಗ್ಗೆ ವಕ್ತಾರರು ತಮ್ಮಅಭಿಪ್ರಾಯಗಳನ್ನು ತಿಳಿಸಿದರು.
ಹೊಸ ವರ್ಷವನ್ನು ಆತ್ಮಪರಿಶೀಲನೆ, ಸದ್ಗುಣಗಳ ಅಳವಡಿಕೆ ಮತ್ತು ಸಮಾಜಮುಖಿ ಚಿಂತನೆಯೊಂದಿಗೆ ಆರಂಭಿಸಬೇಕೆಂದು ಸಂದೇಶ ನೀಡಲಾಯಿತು.
ಯುವಕರಲ್ಲಿ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಮತ್ತು ರಾಷ್ಟ್ರ ಭಾವನೆ ಮೂಡಿಸುವುದು ಇದರ ಉದ್ದೇಶವಾಗಿತ್ತು.
ಗುರೂಜಿ ಆಶೀಶ್​ ವ್ಯಾಸ, ಜೀತೇಂದ್ರ ಮಜೇಥಿಯಾ, ಸುರೇಶ ಅಗರವಾಲ್​, ಅಶೋಕ ಗೋಯಲ್​, ಕಮಲ ಮೆಹತಾ, ಭಜನ್​ ಸಾಮ್ರಾಟ ಅನಿಲ ಮಿಸ್ಕಿನ್​, ದೂಧರಾಮಜಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಚಿಂತಕರು, ಸಮಾಜ ಸೇವಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net