ವಿವಿಧ ಬೇಡಿಕೆ ಈಡೇರಿಸಲು diesel price ಆಗ್ರಹಿಸಿ ಧಾರವಾಡ ಜಿಲ್ಲೆಯ ಎಲ್ಲ ವಾಣಿಜ್ಯ ವಾಹನಗಳ ಸರಕು ಸಾಗಣೆದಾರರ ಒಕ್ಕೂಟದ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಹುಬ್ಬಳ್ಳಿ: ಡೀಸೆಲ್ ದರ ಏರಿಕೆ diesel price ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಧಾರವಾಡ ಜಿಲ್ಲೆಯ ಎಲ್ಲ ವಾಣಿಜ್ಯ ವಾಹನಗಳ ಸರಕು ಸಾಗಣೆದಾರರ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಇಲ್ಲಿಯ ಮಿನಿ ವಿಧಾನಸೌಧದ ಮುಂದೆ ಸಮಾವೇಶಗೊಂಡ ಪ್ರತಿಭಟನಾಕರರು, ಕೇಂದ್ರ ಸರ್ಕಾರ ಡೀಸೆಲ್ ದರ ಏರಿಕೆ ಹಿಂಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೀಸೆಲ್ ದರ ಹೆಚ್ಚಾಗಿದ್ದರಿಂದ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಸರುಕು ಸಾಗಣೆ ದರಗಳಲ್ಲಿ ಸಮರ್ಪಕ ಏರಿಕೆ ಇಲ್ಲದ ಕಾರಣ ಲಾರಿ ಮಾಲೀಕರು ನಷ್ಟ ಅನುಭವಿಸಿವಂತಾಗಿದೆ. ಕೇಂದ್ರ ಸರ್ಕಾರ ತಕ್ಷಣ ಡೀಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರಕು ವಾಹನಗಳಿಗೆ ವಿಎಲ್‌ಟಿಡಿ ಕಡ್ಡಾಯ ಜಾರಿಯಲ್ಲಿ ವಿನಾಯತಿ ನೀಡಬೇಕು. ಆರು ತಿಂಗಳ ಇಎಂಐ ಮೊರಟೋರಿಯಂ ಘೋಷಿಸಬೇಕು. ಸಂಪೂರ್ಣ ಟೋಲ್ ಶುಲ್ಕದ ವಿನಾಯಿತಿ ನೀಡಬೇಕು. ರಸ್ತೆ ಸಾರಿಗೆ ಉದ್ಯಮಕ್ಕೆ ವಿಶೇಷ ನೆರವು ಪ್ಯಾಕೇಜ್ ಘೋಷಿಸಬೇಕು. ಹು-ಧಾ ಜನಪ್ರತಿನಿಗಳು ಟ್ರಕ್ ಟರ್ಮಿನಲ್ ಸ್ಥಾಪಿಸದಿರುವುದು ವಿಷಾದನೀಯ. ಇದರಿಂದ ರಸ್ತೆ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದ್ದು, ತಕ್ಷಣ ಟ್ರಕ್ ಟರ್ಮಿನಲ್ ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಮಹೇಶ ಗಸ್ತೆ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಅಸೋಸಿಯೇಷನ್ ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ, ಪ್ರಮುಖರಾದ ಶೇಖರಯ್ಯ ಮಠಪತಿ, ಗೈಬು ಹೊನ್ಯಾಳ, ನಿಸಾರ್ ಅಹಮದ್ ಮುಲ್ಲಾ, ತೌಕಿರ ಖಾಜಿ, ಪ್ರಭಾಕರ ಉಪಾಧ್ಯೆ ಇತರರಿದ್ದರು.