ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ 16ನೇ ದಿನಕ್ಕೆ

ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ
ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ
Published on
ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಒತ್ತಾಯಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ 15 ದಿನ ಪೂರೈಸಿತು.
ಹುಬ್ಬಳ್ಳಿ ಪಾಲಿಕೆ ಕಟ್ಟಡದಲ್ಲಿ ಸಾಮಾನ್ಯ ಸಭೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಹೋರಾಟ ವೇದಿಕೆಯ ಮುಖಂಡರು ಹುಬ್ಬಳ್ಳಿಗೆ ತೆರಳಿದರು. ಆದರೂ ಹಲವು ಸಂಟನೆಗಳ ಬೆಂಬಲದೊಂದಿಗೆ ಹೋರಾಟಗಾರರು ಧಾರವಾಡ ಪಾಲಿಕೆ ಕಟ್ಟಡದ ಎದುರು ಧರಣಿ ಮುಂದುವರಿಸಿದರು.
ಮಹಾದೇವ ಹೊರಟ್ಟಿ, ವೆಂಕಟೇಶ ಮಾಚಕನೂರ, ಮನೋಜ ಪಾಟೀಲ, ಬಾಳಣ್ಣ ಶೀಗಿಹಳ್ಳಿ ಹಾಗೂ ವಿವಿಧ ಸಂಟನೆಗಳ ಸದಸ್ಯರು ಧರಣಿ ನಡೆಸಿದರು.
ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಮಲ್ಲಿಕಾರ್ಜುನ ಹಡಪದ ನೇತೃತ್ವದಲ್ಲಿ ಸಮಾಜದವರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟವನ್ನು ಬೆಂಬಲಿಸಿದರು.
ಇದೇವೇಳೆ ಬಿಜೆಪಿ ಕಾರ್ಯಕರ್ತರು ಹೋರಾಟ ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡರು. ಮೋಹನ ರಾಮದುರ್ಗ, ರಾಜೇಶ್ವರಿ ಸಾಲಗಟ್ಟಿ, ಶೋಭಾ ಭುಜಂಗನವರ, ಪುಷ್ಪಾ ಮಜ್ಜಗಿ, ರೂಪಾ ಚೌಧರಿ, ಮಂಜುಳಾ ಅಕ್ಕೂರ, ಮಾಲತಿ ಹುಲಿಕಟ್ಟಿ, ಇತರರು ಹೋರಾಟ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net