cheat ಫಾರಿನ್ ಮಹಿಳೆಗೆ ಮರುಳಾಗಿ ವಂಚನೆಗೀಡಾದ ಧಾರವಾಡಿಗ

ಫೇಸ್‌ಬುಕ್‌ ವಂಚನೆ
ಫೇಸ್‌ಬುಕ್‌ ವಂಚನೆ
Published on
ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಫಾರಿನ್ ಮಹಿಳೆಯೊಬ್ಬರು ಭಾರತಕ್ಕೆ ಬರುವುದಾಗಿ ನಂಬಿಸಿ ಧಾರವಾಡ ನಿವಾಸಿಯೊಬ್ಬರಿಂದ 12.76 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.
ವಿನಯ ಶಾನಭಾಗ ವಂಚನೆಗೆ ಒಳಗಾದವರು. ಫೇಸ್‌ಬುಕ್‌ನಲ್ಲಿ ಪರಿಚಯವಾದ ಜನಿಫರ್ ಎಂಬ ಮಹಿಳೆಯು, ನಿಮ್ಮನ್ನು ಭೇಟಿಯಾಗಲು ಫಾರಿನ್‌ನಿಂದ ಭಾರತಕ್ಕೆ ಬರುವೆ ಎಂದಿದ್ದಾಳೆ.
ಸದ್ಯ ದೆಹಲಿ ವಿಮಾನ ನಿಲ್ದಾಣದಲ್ಲಿದ್ದು, ನನ್ನ ಹತ್ತಿರ 95 ಲಕ್ಷ ರೂ. ಟ್ರಾವೆಲಿಂಗ್ ಚೆಕ್ ಇದೆ. ಇದಕ್ಕೆ ಕಸ್ಟಮ್ಸ್ ಅಧಿಕಾರಿಗಳು ಅನುಮತಿಸುತ್ತಿಲ್ಲ. ಅವರಿಗೆ ಹಣ ನೀಡಿದರೆ ನನ್ನನ್ನು ಮುಂದೆ ಹೋಗಲು ಬಿಡುತ್ತಾರೆ ಎಂದು ವಿನಯ ಅವರನ್ನು ನಂಬಿಸಿದ್ದಾಳೆ.
ಆಗ ವಿನಯ ತನ್ನ ಬ್ಯಾಂಕ್ ಖಾತೆಯಿಂದ ಮಹಿಳೆಯ ಬ್ಯಾಂಕ್ ಖಾತೆಗೆ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ಹಣ ವರ್ಗಾಯಿಸಿಕೊಂಡ ಜನಿಫರ್ ವಂಚಿಸಿದ್ದಾಳೆ ಎಂದು ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿನಯ ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net