ಮಧ್ಯಾಹ್ನ 3.30ಕ್ಕೆ ಸಮಾರೋಪ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಗಳಾಗಿ ಸಾಹಿತಿ ಸುರೇಶ ಕೋರಕೊಪ್ಪ, ಎಲ್.ಐ. ಲಕ್ಕಮ್ಮನವರ, ಅನುಪಮಾ ಹಂಸಭಾವಿ, ಮೃತ್ಯುಂಜಯ ವಸ್ತçದ, ದಾನೇಶ ಬಿಂದಲಗಿ, ಪೂರ್ಣಿಮಾ ಕುಂಬಾರ ಆಗಮಿಸುವರು. ಇದೇ ವೇಳೆ ಡಾ. ಉಮೇಶ ತಿಮ್ಮಾಪುರ ಅವರ `ಕಗ್ಗಲ್ಲ ಕ್ರಾಸ್ ಕಥಾ ಸಂಕಲನ'ಕ್ಕೆ 2025ನೇ ಸಾಲಿನ ಅತ್ಯುತ್ತಮ ಕಥಾ ಸಂಕಲನ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು. ರಾಜೇಂದ್ರಕುಮಾರ ಮಠ ಇದ್ದರು.