ಪಾಲಕರ ಇಂಗ್ಲಿಷ್ ವ್ಯಾಮೋಹ ತೊಲಗಲಿ guruvandane

ಧಾರವಾಡದ ಕರ್ನಾಟಕ ಹೈಸ್ಕೂಲ್‌ನ 1997 ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಹಳೇ ವಿದ್ಯಾರ್ಥಿಗಳು.
ಧಾರವಾಡದ ಕರ್ನಾಟಕ ಹೈಸ್ಕೂಲ್‌ನ 1997 ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಹಳೇ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಎನ್.ಜಿ. ಗಲಗಲಿ ಆಶಯ
  • ಕರ್ನಾಟಕ ಹೈಸ್ಕೂಲ್ 1997 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ
ಧಾರವಾಡ: ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಡೋನೇಷನ್ ಹಾವಳಿ ತಪ್ಪಿಸಿದರೆ ಇದು ಸಾಧ್ಯ ಎಂದು ಕರ್ನಾಟಕ ಹೈಸ್ಕೂಲಿನ ನಿವೃತ್ತ ಪ್ರಾಚಾರ್ಯ ಎನ್.ಜಿ. ಗಲಗಲಿ ಹೇಳಿದರು.
ಪ್ರೌಢಶಾಲೆಯ 1997 ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಪುನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.    
ಪಾಲಕರಿಗೆ ಇರುವ ಇಂಗ್ಲಿಷ್ ವ್ಯಾಮೋಹ ತೊಲಗಬೇಕು. ಇದರಿಂದ ಕನ್ನಡ ಮಾಧ್ಯಮ ಶಾಲೆಗಳು ಬೆಳೆಯುತ್ತವೆ. ಇದಕ್ಕೆ ಶಿಕ್ಷಕರು ನಿಸ್ವಾರ್ಥದಿಂದ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಎನ್.ಆರ್. ರಾಜಪುರೋಹಿತ್ ಮಾತನಾಡಿ, ನಮಗೆ ನಮ್ಮ ವಂಶಸ್ಥರ ಹೆಸರು ನೆನಪಿನಲ್ಲಿ ಉಳಿಯದಿದ್ದರೂ ಶಾಲೆಯಲ್ಲಿ ಕೂಡಿ ಕಲಿತ ಸಹಪಾಠಿಗಳು ಹಾಗೂ ಕಲಿಸಿದ ಗುರುಗಳ ಹೆಸರುಗಳು ಜೀವನಪೂರ್ತಿ ನೆನಪಿನಲ್ಲಿ ಇರುತ್ತವೆ. ಇದೇ ಶಾಲಾ ಜೀವನದ ವಿಶೇಷತೆ ಎಂದು ಹೇಳಿದರು.
ಕೆ.ಇ. ಬೋರ್ಡ್ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಜಿ.ಆರ್. ಭಟ್, ಕರ್ನಾಟಕ ಹೈಸ್ಕೂಲಿನ ಪ್ರಾಚಾರ್ಯ ಎನ್.ಎನ್. ಸವಣೂರ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಎಸ್.ವಿ. ದಿಕ್ಷಿತ್, ಎಸ್.ಎನ್. ಹಳ್ಳಿ, ನಾಡಗೌಡ ಸರ್, ಎಫ್.ಎಸ್. ಹುಲ್ಲೂರ, ಆರ್.ಎನ್. ಕೊಂಡಿ, ದೀಪಕ ಕುಲಕರ್ಣಿ, ಸಿಂದಗಿ ಸರ್, ಪಾಂಡುರಂಗಿ ಸರ್, ಗಾಂವಕರ್ ಸರ್, ಗೆಜ್ಜಿ ಸರ್. ಆರ್.ಎನ್. ಕುಲಕರ್ಣಿ ಅವರನ್ನು  ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ಹಳೇಯ ವಿದ್ಯಾರ್ಥಿನಿ ಸುಷ್ಮಾ ಕಾರಡಗಿ ಸ್ವಾಗತಿಸಿದರು. ಶ್ರೀದೇವಿ ಕಳಸದ ಪ್ರಾರ್ಥಿಸಿದರು. ಗುರುವಂದನೆ ಸಮಿತಿಯ ವಿಶ್ವನಾಥ ಜೋಶಿ, ರವಿಕಿರಣ ಬಿಡಿಕರ್, ನಿಜಗುಣಪ್ರಭು ಕೊಂಗಿ, ಗುರುರಾಜ ಕುಲಕರ್ಣಿ, ವಿನಾಯಕ ಪಾಶ್ಚಾಪುರ, ದೀಪಕ ತಲವಾಯಿ, ಮುಷ್ತಾಕ್ ದರ್ಗದ, ಮಂಜುನಾಥ ರಾಯಪ್ಪನವರ, ಆನಂದ ಪಾಟೀಲ, ಹಳೇಯ ವಿದ್ಯಾರ್ಥಿಗಳಾದ ಪ್ರವೀಣ ಜೋರಾಪುರ, ರವಿ ಕಮತಿ, ಮಲ್ಲಿಕಾರ್ಜುನ ಮರಡಿ, ಸಂತೋಷ ವೇರ್ಣೇಕರ್, ವಿನಾಯಕ ಪಾಟೀಲ, ನಿತಿನ ಉಪ್ಪಾರ, ಶುಭಾ ಕುಲಕರ್ಣಿ, ಮೇಧಾ ದಾಮ್ಲೆ, ದೀಪಾ ಹೊಂಗಲ, ಮಹೇಶ ನಾಡಿಗೇರ, ಪ್ರಸನ್ನ ದೇಶಪಾಂಡೆ, ಗುರುರಾಜ ಪಿಸೆ, ಅರುಣ ಸತ್ತಿಗೇರಿ, ಆಶೋಕ ಬಂಡಾ, ಅಭಯ ಗುಡಿ, ಅಜಯ ಗುಡಿ, ವಸಂತ ಜೈನ್, ವಿನೋದ ಜೈನ್, ರಾಮಚಂದ್ರ ಅಳ್ನಾವರ ಸೇರಿದಂತೆ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು. ಶ್ರೀದೇವಿ ಕಳಸದ ಹಾಗೂ ಅರ್ಚನಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಮಯ್ಯ ವಂದನಾರ್ಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net