ಇದೀಗ ಮೂರನೇ ಬಾರಿ ಕರೆದ ಟೆಂಡರ್ನಲ್ಲಿ ಗುತ್ತಿಗೆದಾರರು ಭಾಗಿಯಾಗಿದ್ದು, ಬಿಡ್ ಓಪನ್ ಆಗಿದೆ. ಅವರಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ಭವನ ದುರಸ್ತಿಗೆ ಮೇಯರ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ 92 ಲಕ್ಷ ರೂ. ಹೊಂದಿಸಿ ಕೊಡುತ್ತಿದೆ. ರಾಜ್ಯ ಸರ್ಕಾರ ನೀಡಿರುವ ಶಾಸಕರ ನಿಧಿಯಲ್ಲಿ ನಾನು ಸಹ ಒಂದು ಕೋಟಿ ರೂ. ಕೊಡುವೆ. ಎರಡೂ ಸೇರಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ನಡೆಯಲಿದೆ ಎಂದರು.