JAILER ಧಾರವಾಡ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ಆತ್ಮಹತ್ಯೆ

JAILER ಜೈಲರ್ ಆತ್ಮಹತ್ಯೆ
JAILER ಜೈಲರ್ ಆತ್ಮಹತ್ಯೆ
Published on
ಧಾರವಾಡ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತಾಗಿದ್ದ ಇಲ್ಲಿನ ಕೇಂದ್ರ ಕಾರಾಗೃಹದ ಜೈಲರ್ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಗದಗ ಜಿಲ್ಲೆ ಗಜೇಂದ್ರಗಡದ ಸಿದ್ದರಾಮಪ್ಪ ವಡ್ಡರ (37) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಫೆಬ್ರವರಿಯಲ್ಲಿ ಕಾರಾಗೃಹಕ್ಕೆ ಭೇಟಿ ನೀಡಿದ್ದ ಬಂದಿಖಾನೆ ಇಲಾಖೆಯ ಡಿಜಿಪಿ ಅಲೋಕಕುಮಾರ್ ಅವರು ಸಿದ್ದರಾಮಪ್ಪ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದರು.
ಕಾರಾಗೃಹ ಇಲಾಖೆಯ ಕ್ವಾಟರ್ಸ್‌ನಲ್ಲಿ ವಾಸವಿದ್ದ ಸಿದ್ದರಾಮಪ್ಪ ಶುಕ್ರವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರು ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಪಕ್ಕದ ಮನೆಯವರಿಗೆ ತಿಳಿಸಿದಾಗ ಅವರು ಹೋಗಿ ನೋಡಿದಾಗ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದು ಪತ್ತೆಯಾಗಿದೆ. ಸಂಬಂಧಿಕರು ಬಂದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಸೇವೆಯಿಂದ ಅಮಾನತಾಗಿದ್ದರಿಂದ ಸಿದ್ದರಾಮಪ್ಪ ಮಾನಸಿಕವಾಗಿ ನೊಂದಿದ್ದರು. ಅವರ ಆತ್ಮಹತ್ಯೆಗೆ ಡಿಜಿಪಿ ಅಲೋಕಕುಮಾರ್ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net