ಧಾರವಾಡ: ಇನ್ನರ್ವ್ಹೀಲ್ ಕ್ಲಬ್ ಆಫ್ ಧಾರವಾಡದ ಪದಗ್ರಹಣ ಸಮಾರಂಭ ನಗರದ ವಿಠ್ಠಲ್ ತೇಜ್ ಕ್ಲಿನಿಕ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರುಗಿತು. ಡಿಸ್ಟ್ರಿಕ್ಟ್ ಖಜಾಂಚಿ ಸಹನಾ ಪೈಕೋಟಿ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಸುನೀತಾ ಮುದಕಣ್ಣನವರ, ಕಾರ್ಯದರ್ಶಿಯಾಗಿ ಮಾಲಾ ಮನಗುಂಡಿ, ಐಎಸ್ಒ ಆಗಿ ವಿದ್ಯಾ ಭಟ್ಟ, ಸಂಪಾದಕರಾಗಿ ಯಶೋಧಾ ಅಂಗಡಿ, ಖಜಾಂಚಿಯಾಗಿ ಸ್ನೆಹಲ್ ದೇಶಪಾಂಡೆ ಅಧಿಕಾರ ವಹಿಸಿಕೊಂಡರು.
ಶಾಲಾ ಮಕ್ಕಳಿಗೆ ನೋಟ್ಬುಕ್, ಶಾಲಾ ಶುಲ್ಕ ಪಾವತಿ, ಮಹಿಳೆಇಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯ, ನೇತ್ರ ತಜ್ಞೆ ಡಾ. ನೀತಾ ಸಾಂಬ್ರಾಣಿ, ರೈತ ಮಹಿಳೆಯನ್ನು ಸನ್ಮಾನಿಸಲಾಯಿತು.