ಪ್ರತ್ಯೇಕ ಪಾಲಿಕೆಗಾಗಿ ಧಾರವಾಡ ಬಂದ್​ 30ರಂದು

ಬಿ.ಡಿ. ಹಿರೇಮಠ ಸುದ್ದಿಗೋಷ್ಠಿ
ಬಿ.ಡಿ. ಹಿರೇಮಠ ಸುದ್ದಿಗೋಷ್ಠಿ
Published on
ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಕುರಿತು ಸಚಿವ ಸಂಪುಟದ ಶಿಾರಸಿಗೆ ಅನುಮೋದನೆ ನೀಡಲು ಒತ್ತಾಯಿಸಿ ಮೇ 30ರಂದು "ಧಾರವಾಡ ಬಂದ್​' ಮೂಲಕ ಪ್ರತಿಭಟಿಸಲಾಗುವುದು ಎಂದು ಹಿರಿಯ ಹೋರಾಟಗಾರ ಬಿ.ಡಿ. ಹಿರೇಮಠ ಹೇಳಿದರು.
ಧಾರವಾಡ ಪಾಲಿಕೆ ಕಟ್ಟಡದ ಎದುರು ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರತ್ಯೇಕ ಪಾಲಿಕೆಗೆ ಅಡ್ಡಗಾಲು ಹಾಕುತ್ತಿರುವುದು ಖಂಡನೀಯ. ಹೋರಾಟಗಾರರ ನಿಯೋಗ ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ವರ್ಷವಾಗುತ್ತ ಬಂದರೂ ವಿಳಂಬ ಧೋರಣೆ ಅನುಸರಿಸಿ ಈಗ ಕಾನೂನು ಸಲಹೆ ಪಡೆಯುವ ಮಾತುಗಳನ್ನಾಡಿದ್ದಾರೆ. 30ರವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ರಾಜ್ಯಪಾಲರಿಂದ ಸ್ಪಂದನೆ ಸಿಗದಿದ್ದರೆ 30ರಂದು "ಧಾರವಾಡ ಬಂದ್​' ಮಾಡಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿ.ಡಿ. ಹಿರೇಮಠ ತಿಳಿಸಿದರು.
ಮಹದೇವ ಹೊರಟ್ಟಿ, ಮೋಹನ ಲಿಂಬಿಕಾಯಿ, ವೆಂಕಟೇಶ ಮಾಚಕನೂರ, ವಿಠ್ಠಲ ಕಮ್ಮಾರ, ಶಿವಶಂಕರ ಹಂಪಣ್ಣವರ, ಗುರುರಾಜ ಹುಣಸಿಮರದ, ದಾನಪ್ಪ ಕಬ್ಬೇರ, ಪ್ರಕಾಶ ಘಾಟಗೆ, ರಾಜು ಕಮತಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net