Dharmasthal ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಮಾತೃಶ್ರೀ ಪದ್ಮಲತಾ ನಿರಂಜನಕುಮಾರ ಉದ್ಘಾಟಿಸಿದರು. ದಯಾಶೀಲ, ಎಂ.ಎಸ್. ಸಿಂಧೂರ, ಡಾ. ನೇತ್ರಾವತಿ ಗಬ್ಬೂರ, ಇತರರು ಇದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತೃಶ್ರೀ ಪದ್ಮಲತಾ ನಿರಂಜನಕುಮಾರ- ಅವರು, ಧರ್ಮಸ್ಥಳವು ಸತ್ಯಮೇವ ಜಯತೆ ಎಂಬಂತೆ ಇದೀಗ ಕಳಂಕಮುಕ್ತವಾಗಿದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರ ಧರ್ಮವನ್ನು ಸಮಾಜಕ್ಕೆ ಬಿತ್ತರಿಸಿದರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ಕಾಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಅತಿಥಿಗಳಾಗಿದ್ದ ಧಾರವಾಡ -ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಯೋಜನೆಯು ನಡೆದು ಬಂದ ದಾರಿ, ಪೂಜ್ಯರು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿದರು.
ಪೊಲೀಸ್ ಅಧಿಕಾರಿ ಎಂ.ಎಸ್. ಸಿಂಧೂರ, ಹೆಣ್ಣುಮಕ್ಕಳು ವೃತ್ತಿ ಜೀವನದೊಂದಿಗೆ ಕೌಟುಂಬಿಕ ನಿರ್ವಹಣೆ ಮತ್ತು ಮಕ್ಕಳ ಬಗ್ಗೆ ಜಾಗೃತಿಯನ್ನು ವಹಿಸಬೇಕಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕಿನ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಗತ್ಯವಿರುವ ಸದಸ್ಯರಿಗೆ ಸಂಸ್ಥೆ ಜಾಮೀನು ನೀಡಿ ಸಾಲ ಒದಗಿಸುತ್ತಿದೆ. ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.