ಮಹನೀಯರ ಜೀವನ ಚರಿತ್ರೆಯ ಪುಸ್ತಕ ಓದಿ

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಪ್ರೊ.ಸಂಪಿಗೆ ತೋಂಟದಾರ್ಯ ಅವರನ್ನು ಸನ್ಮಾನಿಸಲಾಯಿತು. ಡಾ.ಸಿದ್ದನಗೌಡ ಪಾಟೀಲ, ಶ್ರೀನಿವಾಸ್ ವಾಡಪ್ಪಿ, ಶಂಕರ ಕುಂಬಿ, ಶಂಕರ ಹಲಗತ್ತಿ ಇತರರಿದ್ದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಪ್ರೊ.ಸಂಪಿಗೆ ತೋಂಟದಾರ್ಯ ಅವರನ್ನು ಸನ್ಮಾನಿಸಲಾಯಿತು. ಡಾ.ಸಿದ್ದನಗೌಡ ಪಾಟೀಲ, ಶ್ರೀನಿವಾಸ್ ವಾಡಪ್ಪಿ, ಶಂಕರ ಕುಂಬಿ, ಶಂಕರ ಹಲಗತ್ತಿ ಇತರರಿದ್ದರು.
Published on
ಧಾರವಾಡ: ವಿದ್ಯಾರ್ಥಿಗಳಿದ್ದಾಗಲೇ ಮುಂದೆ ಏನಾಗಬೇಕು, ಏನನ್ನ ಸಾಽಸಬೇಕು ಎನ್ನುವುದನ್ನು ಯೋಚಿಸಬೇಕು. ದೊಡ್ಡ ದೊಡ್ಡ ಸಾಧನೆ ಮಾಡಿರುವ ಮಹನೀಯರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದುವುದರಿಂದ ನಮ್ಮ ಜೀವನದಲ್ಲಿ ಸಾಸುವ ದಾರಿ ಕಾಣುತ್ತದೆ. ಅಂತಹ ಪುಸ್ತಕಗಳೆ ನಮ್ಮ ವಿಜಯದ ಮೆಟ್ಟಿಲುಗಳಾಗುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಸಂಪಿಗೆ ತೋಂಟದಾರ್ಯ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ನಾಡ ಹಬ್ಬ 2025 ಅಂಗವಾಗಿ ಶನಿವಾರ ನಡೆದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿ ಅವರು ಮಾತನಾಡಿದರು. ಅಬ್ದುಲ್ ಕಲಾಂ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮನೆ ಮನೆಗೆ ಹೋಗಿ ಪತ್ರಿಕೆಗಳನ್ನು ಹಂಚುತ್ತಿದ್ದರು. ಆದರೆ, ಮುಂದೊAದು ದಿನ ಅವರು ರಾಷ್ಟçಪತಿಯಾಗಿ, ಭಾರತ ರತ್ನ ಅವಾರ್ಡ್ನ್ನು ಪಡೆದಿದ್ದಾರೆ. ಅವರ ಬಗ್ಗೆ ಓದಬೇಕು. ತಿಳಿದುಕೊಳ್ಳಬೇಕು. ಅಂತಹ ಮಹನೀಯರನ್ನು ನೆನದು ನಮಗೆ ಆಸಕ್ತಿ ಇರುವ ವಿಷಯಗಳತ್ತ ನಡೆಯಬೇಕು ಎಂದರು. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಸಾಽಸಬಹುದು. ಯಾವುದೇ ರಂಗವಿದ್ದರೂ ಕೆಲಸ ಮಾಡಲು ಹಿಜರಿಯಬಾರದು ಎಂದರು.
ಹುಟ್ಟು ಸಾವು ಜಗತ್ತಿನ ಸಹಜ ನಿಯಮ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈ ಜನ್ಮದಲ್ಲಿ ಮಾಡಬೇಕಾದ ನಮ್ಮ ಕೆಲಸಗಳನ್ನು ಗಮನವಿಟ್ಟು ಮಾಡಬೇಕು ಎಂದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಡಾ.ಸಿದ್ದನಗೌಡ ಪಾಟೀಲ, ಶ್ರೀನಿವಾಸ್ ವಾಡಪ್ಪಿ, ಹಾಗೂ ಅಂಜುಮನ್, ನಿಡುವಣಿ ಮತ್ತು ಆರ್.ಎಲ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net