ಜೈಲು ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹಗಳಲ್ಲಿ ಪಾರದರ್ಶಕತೆ, ಶಿಸ್ತು ಕಾಪಾಡುವುದು ಮೊದಲ ಆದ್ಯತೆ. ಜೈಲಿನಲ್ಲಿ ಗಾಂಜಾ, ಡ್ರಗ್ಸ್, ಮೊಬೈಲ್ನಂಥ ನಿಷೇಧೀತ ವಸ್ತುಗಳನ್ನು ನಿಯಂತ್ರಿಸಲು ತಾಕೀತು ಮಾಡಲಾಗಿದೆ. ಜೈಲಿನ ನಿಯಮಗಳನ್ನು ಉಲ್ಲಂಘಿಸುವ ಸಿಬ್ಬಂದಿ ಹಾಗೂ ಕೈದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಲಿಸಲಾಗುವುದು. ಜೈಲಿನಲ್ಲಿ ಅಳವಡಿಸಿದ ಜಾಮರ್ನಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.