ದೇವೇಂದ್ರ ದೃಷ್ಟಿ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ art

art ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಚಿತ್ರಕಲಾವಿದ ಮಂಜುನಾಥ ಭಂಡಾರೆ.
art ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಚಿತ್ರಕಲಾವಿದ ಮಂಜುನಾಥ ಭಂಡಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ತೆರೆದಿರಲಿದೆ.
  • 50ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ.
  • ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹುಬ್ಬಳ್ಳಿ:
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಚಿತ್ರಕಲಾವಿದ ಮಂಜುನಾಥ ಭಂಡಾರೆ, ನಿತ್ಯ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ತೆರೆದಿರಲಿದೆ ಎಂದರು.
ದೇವೇಂದ್ರ ಬಡಿಗೇರ ಅವರು ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬಿಡಿಸಿರುವ ನಿಸರ್ಗ ಚಿತ್ರ, ಮಿನಿಯೇಚರ್, ಲ್ಯಾಂಡ್​ಸ್ಕೇಪ್​ನ 50ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.
19ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶ ಬಮ್ಮಕ್ಕನವರ ಉದ್ಘಾಟಿಸುವರು.
ರಾಮನಕೊಪ್ಪ ಗ್ರಾಮದ ಮಹದೇವಪ್ಪ ಕುಂಬಾರಗೇರಿ, ದೊಡ್ಡಾಟ ಕಲಾವಿದ ರಮೇಶ ಕರಬಸಮ್ಮನವರ, ಮುಖ್ಯೋಪಾಧ್ಯಾಪಕಿ ರೇಣುಕಾ ಗೌಡರ, ನಿವೃತ್ತ ಚಿತ್ರಕಲಾ ಶಿಕ್ಷಕ ರವಿಶಂಕರ ಪತ್ತಾರ, ಧಾರವಾಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ತೋಟಗಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹುಬ್ಬಳ್ಳಿಯ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿ ಅಧ್ಯಕ್ಷ ರಾಮಚಂದ್ರ ಗರಗ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಚಿತ್ರ ಕಲಾವಿದರಾದ ಗಣಪತಿ ಘಾಟಗೆ, ಹರೀಶ ಮಲ್ಲಿಗವಾಡ, ಸುರೇಶ ಅರ್ಕಸಾಲಿ, ಲಿಂಗರಾಜ ಬಾರಕೇರ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net