ಬೆಳಗ್ಗೆ ಮಹಿಳೆಯರಿಂದ ತೋಟಿಲೋತ್ಸವ ಜರುಗಿತು. ಪಾಲಿಕೆ ಮಾಜಿ ಸದಸ್ಯ ಪಿ.ಕೆ. ರಾಯನಗೌಡ್ರ ದೇವಲ ಮಹರ್ಷಿ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆ ಓಣಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೀರಭದ್ರ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ಇದೇ ವೇಳೆ ತುಳಸಿ ವಿವಾಹ ಮಾಡಲಾಯಿತು. ನಂತರ ಹುಬ್ಬಳ್ಳಿ ಸಿದ್ಧಾರೂಢ ಮಠದ ಶ್ರೀ ಸಿದ್ಧಾನಂದ ಭಾರತಿ ಸ್ವಾಮೀಜಿ ದೇವಲ ಮಹಿರ್ಷಿ ಕುರಿತು ಪ್ರವಚನ ನೀಡಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.