support to msme ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಲಘು ಉದ್ಯೋಗ ಭಾರತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡರು. ರಮೇಶ ಪಾಟೀಲ, ಪ್ರಶಾಂತ ಹೆಬಸೂರ, ನಾಗರಾಜ ದಿವಟೆ, ಇತರರು ಇದ್ದರು.
ಅತಿಥಿಯಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಂಎಸ್ಎಂಇ ಇಲಾಖೆ ಕೈಗೊಂಡ ಸುಧಾರಣೆ ಕ್ರಮಗಳನ್ನು ತಿಳಿಸಿದರು. ಸಭೆಯಲ್ಲಿದ್ದ ಉದ್ಯಮಿಗಳು, ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು. ಶಾಸಕ ಮಹೇಶ ಟೆಂಗಿನಕಾಯಿ ಇದ್ದರು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ರಮೇಶ ಪಾಟೀಲ, ಲಘು ಉದ್ಯೋಗ ಭಾರತಿ ಅಧ್ಯಕ್ಷ ಪ್ರಶಾಂತ ಹೆಬಸೂರ ಅವರು ಸಚಿವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಸಿಐಐ, ಟೈ, ಕಾಸಿಯಾ, ಎನ್ಕೆಎಸ್ಎಸ್ಐಎ ಮುಂತಾದ ಸಂಸ್ಥೆಗಳು, ಪ್ರಮುಖ ವಾಣಿಜ್ಯೋದ್ಯಮಿಗಳು ಐಐಐಟಿ, ಕೆಎಲ್ಇ ವಿಶ್ವವಿದ್ಯಾಲಯ ಮತ್ತು ಇನ್ಕ್ಯುಬೇಟರ್ ಸಂಸ್ಥೆಗಳ ಪ್ರಮುಖರು ಮತ್ತು ಪ್ರತಿನಿಧಿಗಳು ತಮ್ಮಅಭಿಪ್ರಾಯಗಳನ್ನು ಹಂಚಿಕೊಂಡರು. 110ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.