ಹುಬ್ಬಳ್ಳಿಯ ಕಲ್ಯಾಣನಗರದಲ್ಲಿರುವ dental health ಲೇಸರ್ ವೇದಾ ಡೆಂಟಲ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶ್ವ ತಂಬಾಕು ವಿರೋಧಿ ದಿನ ನಿಮಿತ್ತ ಭಾನುವಾರ ಡಾ. ಚಂದ್ರಶೇಖರ ಯಾವಗಲ್, ಡಾ. ಪೂಜಾ ಯಾವಗಲ್ ನೇತೃತ್ವದಲ್ಲಿ ಉಚಿತವಾಗಿ ಜನರ ದಂತ ತಪಾಸಣೆ ನಡೆಸಲಾಯಿತು.
Published on:
Copied
Follow Us
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಕಲ್ಯಾಣನಗರದಲ್ಲಿರುವ ಲೇಸರ್ ವೇದಾ ಡೆಂಟಲ್ ಇನ್‌ಸ್ಟಿಟ್ಯೂಟ್‌ನಲ್ಲಿ dental health ವಿಶ್ವ ತಂಬಾಕು ವಿರೋಧಿ ದಿನ ನಿಮಿತ್ತ ಭಾನುವಾರ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.
ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಡಾ. ಚಂದ್ರಶೇಖರ ಯಾವಗಲ್ ನೇತೃತ್ವದಲ್ಲಿ 70ಕ್ಕೂ ಹೆಚ್ಚು ಜನರ ದಂತ ಆರೋಗ್ಯವನ್ನು ತಪಾಸಣೆ ನಡೆಸಲಾಯಿತು.
ಬೆಳಗ್ಗೆಯಿಂದ ರಾಯಚೂರು, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಕಾರವಾರ ಸೇರಿದಂತೆ ವಿವಿಧ ಜಿಲ್ಲೆಯಿಂದ ಜನರು ಆಗಮಿಸಿ ದಂತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಮೊದಲಿಗೆ ದಂತ ಮತ್ತು ಬಾಯಿ ಆರೋಗ್ಯವನ್ನು ತಪಾಸಣೆ ನಡೆಸಲಾಯಿತು. ತದನಂತರ ತಂಬಾಕು ತಿರಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಓರಲ್ ಬ್ಲೂ ತಂತ್ರಜ್ಞಾನದ ಮೂಲಕ ಲೇಸರ್ ಥೆರಪಿ ಮಾಡಲಾಯಿತು.
ಮೌತ್ ಕ್ಯಾನ್ಸರ್ ಡಿಟೆಕ್ಷನ್ ಮತ್ತು ತಂಬಾಕು ಡಿ ಅಡಿಕ್ಷನ್ ಲೇಸರ್ ಥೆರಪಿಯನ್ನು ನಡೆಸಲಾಗಿದೆ. ತಂಬಾಕು ಡಿ ಅಡಿಕ್ಷನ್ ಲೇಸರ್ ಥೆರಪಿಗೊಳಪಡುವ ತಂಬಾಕು ಸೇವಿಸುವವರು ಕ್ರಮೇಣವಾಗಿ ತಂಬಾಕು ಸೇವಿಸುವುದನ್ನು ಬಿಟ್ಟು ಬಿಡಲಿದ್ದಾರೆ ಎಂದು ಡಾ. ಚಂದ್ರಶೇಖರ ಯಾವಗಲ್ ತಿಳಿಸಿದರು.
ಡಾ. ಪೂಜಾ ಯಾವಗಲ್, ಡಾ. ರತ್ನಾ ಕುಮಾರ, ಡಾ. ರಕ್ಷಿತಾ ಹಿರೇಗೌಡರ, ಡಾ. ಅಬಿದಾ ಇತರರಿದ್ದರು.