dental check ಕೆಎಲ್​ಇ ವಿವಿಯಲ್ಲಿ ಎಐ ದಂತ ತಪಾಸಣೆ

dental check ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಐ ದಂತ ತಪಾಸಣೆ ಶಿಬಿರ ನಡೆಸಿಕೊಟ್ಟ ಧೋತ್ರದ ಸನ್ನಿ ಡೆಂಟಲ್​ ಆರ್ಥೊಡಾಂಟಿಕ್​ ಕ್ಲಿನಿಕ್​ನ ಡಾ. ಶಿವಲೀಲಾ ಧೋತ್ರದ ಅವರನ್ನು ಗೌರವಿಸಲಾಯಿತು. ಡಾ. ಉಮಾ ಮುದೇಂಗುಡಿ, ಡಾ. ಮಿನಲ್​ ಸಾಳುಂಕೆ, ಡಾ. ತನುಜಾ ಪಾಟೀಲ, ಡಾ. ಸುಜಾತಾ ಪಾಟೀಲ ಇತರರು ಇದ್ದರು.
dental check ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಐ ದಂತ ತಪಾಸಣೆ ಶಿಬಿರ ನಡೆಸಿಕೊಟ್ಟ ಧೋತ್ರದ ಸನ್ನಿ ಡೆಂಟಲ್​ ಆರ್ಥೊಡಾಂಟಿಕ್​ ಕ್ಲಿನಿಕ್​ನ ಡಾ. ಶಿವಲೀಲಾ ಧೋತ್ರದ ಅವರನ್ನು ಗೌರವಿಸಲಾಯಿತು. ಡಾ. ಉಮಾ ಮುದೇಂಗುಡಿ, ಡಾ. ಮಿನಲ್​ ಸಾಳುಂಕೆ, ಡಾ. ತನುಜಾ ಪಾಟೀಲ, ಡಾ. ಸುಜಾತಾ ಪಾಟೀಲ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 100ಕ್ಕೂ ಹೆಚ್ಚು ಜನರಿಗೆ ಪ್ರಯೋಜನ
  • ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಿಶೇಷ ಶಿಬಿರ
ಹುಬ್ಬಳ್ಳಿ: dental check ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ, ಮಹಿಳಾ ಸಬಲೀಕರಣ ಘಟಕ, ಇನ್ನರ್​ವ್ಹೀಲ್​ ಕ್ಲಬ್​ ಹುಬ್ಬಳ್ಳಿ ನಾರ್ತ್​ ಹಾಗೂ ಧೋತ್ರದ ಸನ್ನಿ ಡೆಂಟಲ್​ ಆರ್ಥೊಡಾಂಟಿಕ್​ ಕ್ಲಿನಿಕ್​ ಸಂಯುಕ್ತ ಆಶ್ರಯದಲ್ಲಿ ಗುರುವಾರ ಬಿವಿಬಿ ಕ್ಯಾಂಪಸ್​ನಲ್ಲಿ ಉಚಿತ ಎಐ ರೋಬೋಟ್​ ದಂತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಿಶೇಷವಾಗಿ ಈ ಶಿಬಿರ ಆಯೋಜಿಸಲಾಗಿತ್ತು. ಎಐ ಸಹಾಯದಿಂದ ದಂತ ತಪಾಸಣೆ ಮಾಡಿ ತಂತ್ರಜ್ಞಾನದ ಮೂಲಕ ದಂತ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.
ಶಿಬಿರದಲ್ಲಿ ಪಾಲ್ಗೊಂಡವರು ಅತ್ಯಾಧುನಿಕ ಎಐ ಆಧಾರಿತ ದಂತ ತಪಾಸಣೆಯ ಹೊಸ ಅನುಭವ ಪಡೆದು, ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೆ ಪತ್ತೆ ಹಚ್ಚುವ ಹಾಗೂ ನಿಖರವಾಗಿ ಮೌಲ್ಯಮಾಪನ ಮಾಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು.
ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣ ಘಟಕದ ಡಾ. ಉಮಾ ಮುದೇಂಗುಡಿ ಹಾಗೂ ಡಾ. ಮಿನಲ್​ ಸಾಳುಂಕೆ ಅವರು ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.
ದಂತ ಶಸ್ತ್ರಚಿಕಿತ್ಸಕಿ ಡಾ. ಶಿವಲೀಲಾ ಧೋತ್ರದ ಹಾಗೂ ಆರ್ಥೊಡಾಂಟಿಸ್ಟ್​ ಡಾ. ಇಗ್ನೇಷಿಯಸ್​ ಫರ್ನಾಂಡಿಸ್​ ಶಿಬಿರ ಮುನ್ನಡೆಸಿ ಉಚಿತ ದಂತ ತಪಾಸಣೆ ಮಾಡಿ ಸಲಹೆ ನೀಡಿದರು. ಉತ್ತಮ ದಂತ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು.
ಇನ್ನರ್​ವ್ಹೀಲ್​ ಕ್ಲಬ್​ ಆಫ್​ ಹುಬ್ಬಳ್ಳಿ ನಾರ್ತ್​ ಅಧ್ಯಕ್ಷೆ ಡಾ. ತನುಜಾ ಪಾಟೀಲ, ಕಾರ್ಯದರ್ಶಿ ಡಾ. ಸುಜಾತಾ ಪಾಟೀಲ ಸಹಕಾರ ನೀಡಿದರು. 100ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net