ಸಂಸ್ಥೆಯ ಹು-ಧಾ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ 2026ರ ಏಪ್ರಿಲ್ 20ರಿಂದ 24ರ ವರೆಗೆ ಇನ್ಕಾಮೆಕ್ಸ್- ಕೈಗಾರಿಕಾ, ವಾಣಿಜ್ಯ ವ್ಯಾಪಾರ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದರ ಉದ್ಘಾಟನೆಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರನ್ನು ಆಹ್ವಾನಿಸಲಾಗಿದೆ. ದೊಡ್ಡ ಉದ್ಯಮಿಗಳು, ನವೋದ್ಯಮಿಗಳು, ಮಹಿಳಾ ಉದ್ಯಮಿಗಳು ಪಾಲ್ಗೊಳ್ಳುವರು. ಮಾರಾಟ ಅಭಿವೃದ್ಧಿ ವಿಚಾರ ಸಂಕಿರಣ, ಕಾರ್ಯಾಗಾರ ಒಳಗೊಂಡಿದೆ. ಕೃಷಿ, ಆಹಾರ ಸಂಸ್ಕರಣೆ ಉಪಕರಣಗಳು ಸೇರಿ ಸುಮಾರು 400 ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.