ಚಂದ್ರಮೌಳೇಶ್ವರ ಕಾರಿಡಾರ್ಗೆ 10 ಕೋಟಿ ಬಿಡುಗಡೆಗೆ ಆಗ್ರಹ corridor
corridor ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಗೆ ಆಗ್ರಹಿಸಿ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಶಾಸಕ ಮಹೇಶ ಟೆಂಗಿನಕಾಯಿ ಮನವಿ ಸಲ್ಲಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೇಂದ್ರ ಸಚಿವ ಶೇಖಾವತ್ಗೆ ಮನವಿ ಸಲ್ಲಿಸಿದ ಶಾಸಕ ಮಹೇಶ ಟೆಂಗಿನಕಾಯಿ.
ಏಪ್ರಿಲ್ನಲ್ಲಿ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ.
ಹುಬ್ಬಳ್ಳಿ- ಜೋಧಪುರ ಮಧ್ಯೆ ನೇರ ವಿಮಾನ ಯಾನ
ಹಂಪಿಯಿಂದ ಹುಬ್ಬಳ್ಳಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಶಾಸಕ ಮಹೇಶ ಟೆಂಗಿನಕಾಯಿ ನಗರದಲ್ಲಿ ಭೇಟಿ ಮಾಡಿದರು.
ಚಂದ್ರಮೌಳೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳನ್ನು ಸಚಿವರಿಗೆ ವಿವರಿಸಿದರು.
ಕಾಶಿ ಹಾಗೂ ಅಯೋಧ್ಯೆ ಕಾರಿಡಾರ್ ಮಾದರಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನ ಕಾರಿಡಾರ್ ನಿರ್ವಿುಸುವಂತೆ ಆಗ್ರಹಿಸಿದರು.
ಮನವಿಗೆ ಸ್ಪಂಧಿಸಿದ ಸಚಿವ ಶೇಖಾವತ್, ಏಪ್ರಿಲ್ನಲ್ಲಿ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಭವರಾಲಾಲ್ ಜೈನ್, ಮೋಹನಲಾಲ್ ಜೈನ್ ಹಾಗೂ ಇತರರಿದ್ದರು.
ನಂತರ ವಿಮಾನ ನಿಲ್ದಾಣದಲ್ಲಿ ಸಚಿವರನ್ನು ಭೇಟಿ ಮಾಡಿದ ರಾಜಸ್ಥಾನ ಸಮಾಜದ ಪ್ರಮುಖರು, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಮಠವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡಿದರು.
ಹುಬ್ಬಳ್ಳಿ- ಜೋಧಪುರ ಮಧ್ಯೆ ನೇರ ವಿಮಾನ ಯಾನ ಮತ್ತು ರೈಲು ಸಂಚಾರ ಪ್ರಾರಂಭಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಸನ್ಮಾನಿಸಲಾಯಿತು.
ಮಹೇಂದ್ರ ಸಿಂಘಿ, ರಮೇಶ ಭಾಪಣಾ, ಇಂದರ ಜೈನ್, ಸುಭಾಷ ಡಂಕ, ಖೇತಸಿಂಗ್, ಜಗದೀಶ ಸುಥಾರ ಹಾಗೂ ಇತರರು ಹಾಜರಿದ್ದರು.