ಆದಿತ್ಯ ಮ್ಯಾಗೇರಿ ಸಾವಿಗೆ ನ್ಯಾಯ ಕಲ್ಪಿಸಲು ಆಗ್ರಹ

ಮೃತ ಆದಿತ್ಯಾ ಮ್ಯಾಗೇರಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹ
ಮೃತ ಆದಿತ್ಯಾ ಮ್ಯಾಗೇರಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹ
Published on
ಧಾರವಾಡ: ಗಾಂಜಾ ಸೇವನೆ ಸುಳ್ಳು ಆರೋಪದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಆದಿತ್ಯ ಮ್ಯಾಗೇರಿ ಸಾವಿಗೆ ನ್ಯಾಯ ಸಿಗಬೇಕು ಮತ್ತು ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಂಗಳವಾರ ಸಮಾನ ಮನಸ್ಕರ ವೇದಿಕೆ ಮತ್ತು ಗೆಳೆಯರ ಬಳಗದಿಂದ ಜಿಲ್ಲಾಽಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಜಿಲ್ಲಾಽಕಾರಿ ಕಚೇರಿ ಎದುರು ಟೆಂಟ್ ಹಾಕಿ ಪ್ರತಿಭಟಿಸಿದರು. ಅದಿತ್ಯ ಅವರ ಅಕಾಲಿಕ ಮರಣವು ನಾಗರಿಕ ಸಮಾಜ ತೆಲೆತಗ್ಗಿಸುವಂತೆ ಮಾಡಿದೆ. ಬಡ ಕುಟುಂಬದಲ್ಲಿ ಈಗ ವಯಸ್ಸಾದ ತಾಯಿ ಮತ್ತು ಒಬ್ಬ ಸಹೋದರಿ ಇದ್ದಾರೆ. ಆ ಕುಟುಂಬಕ್ಕೆ ಆದಿತ್ಯನೇ ಏಕೈಕ ಆಧಾರವಾಗಿದ್ದನು. ಆತನ ಸಾವು ಆ ಮನೆಯನ್ನು ಕತ್ತಲೆಗೆ ದೂಡಿದೆ. ಆದಿತ್ಯನ ಜೀವಕ್ಕೆ ಬೆಲೆ ಕಟ್ಟಲಾಗದಿದ್ದರೂ ಅವರ ಜೀವನ ನಿರ್ವಹಣೆಗೆ ಸರ್ಕಾರವು ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಿ ಕುಟುಂಬದ ರಕ್ಷಣೆಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಸುಳ್ಳು ಆರೋಪ ಮಾಡಿದವರ ವಿರುದ್ಧ ಪಕ್ಷ-ಪಾತವಿಲ್ಲದೆ ತನಿಖೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅವರ ಸಹಯೋದರಿಗೆ ಅರ್ಹತೆಗೆ ತಕ್ಕಂತೆ ಸಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು, ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ರವಾನಿಸಿದರು.
ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಮೋಹನ ರಾಮದುರ್ಗ, ಶಾಂತಾ ಪವಾರ, ಶಿವಾನಂದ ಕವಳಿ, ವಿಜಯ ನಾಗಮ್ಮನವರ, ನಾಗರಾಜ ಹಂಗರಕಿ, ಮಲ್ಲಿಕಾರ್ಜುನ ಮಠಪತಿ, ಜ್ಯೋತಿ ಪತ್ತಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net