ಪರಿಷತ ಕನಿಷ್ಠ ವೇತನ ಜಾರಿಗೆ ಆಗ್ರಹ

ಸರ್ಕಾರಿ ಹಾಸ್ಟೆಲ್​ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪ್ರತಿಭಟನೆ
ಸರ್ಕಾರಿ ಹಾಸ್ಟೆಲ್​ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪ್ರತಿಭಟನೆ
Published on
ಧಾರವಾಡ: ಪರಿಷತ ಕನಿಷ್ಠ ವೇತನ ಜಾರಿ ಮಾಡುವುದು ಸೇರಿ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್​ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಹತ್ತು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಆಗಿರಲಿಲ್ಲ, ಬೆಲೆ ಏರಿಕೆಗಳ ಈ ದಿನಮಾನದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾದ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಹೆಚ್ಚಳದಿಂದ ಅಲ್ಪಸ್ವಲ್ಪ ಅನುಕೂಲವಾಗಿತ್ತು. ಆದರೆ, ಈ ಕನಿಷ್ಠ ವೇತನ ಸರ್ಕಾರ ತಡೆಹಿಡಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮರುಪರಿಶೀಲನೆಗಾಗಿ ಸಚಿವ ಸಂಪುಟ ಉಪಸಮಿತಿ ರಚಿಸುವುದರೊಂದಿಗೆ ಸರ್ಕಾರ ನೌಕರರಿಗೆ ದ್ರೋಹ ಬಗೆದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಿರ್ಕ ಇಲಾಖೆ ಪರಿಷ್ಕರಿಸಿ ಪ್ರಕಟಿಸಿದ ಕನಿಷ್ಠ ವೇತನ ಜಾರಿ ಮಾಡಬೇಕು. ಕನಿಷ್ಠ ವೇತನ ಮರುಪರಿಶೀಲನೆಗಾಗಿ ರಚಿಸಿದ ಸಚಿವ ಸಂಪುಟ ಉಪಸಮಿತಿ ರದ್ದಾಗಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂದಲ್ಲಿ ಕಳೆದ 15-20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಕೆಲಸದ ಅವಧಿ ಹಾಗೂ ವಾರದ ರಜೆ ನಿಗದಿ ಮಾಡಬೇಕು, ಸೇವಾ ಭದ್ರತೆ ನೀಡುವುದು ಹಾಗೂ ಹೊರಗುತ್ತಿಗೆ ನೌಕರರ ಶೋಷಣೆ ತಡೆಗಟ್ಟುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದಶಿರ್ ಮಹೇಶ ಪತ್ತಾರ, ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ಸಂದ ಮುಖಂಡರಾದ ಹನಮಂತ ಮ್ಯಾಗೇರಿ, ಪ್ರದಿಪ ದಳವಾಯಿ, ಬಸಮ್ಮ ಕಿಳ್ಳಿಕೇತರ, ರೂಪಾ ಗೊಂದಳೆ, ಬಸವರಾಜ ಚವ್ಹಾಣ, ಅಶೋಕ ಹಾವೇರಿ, ಶಿವನಗೌಡ, ನೀಲಪ್ಪ, ಶಂಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net