ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹ

ಮಲ್ಲಿಕಾರ್ಜುನಗೌಡ ಬಾಳನಗೌಡರ
ಮಲ್ಲಿಕಾರ್ಜುನಗೌಡ ಬಾಳನಗೌಡರ
Published on
ಧಾರವಾಡ: ನಾಡಿನ ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದು, ಬರುವ ಕೇಂದ್ರ ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಅತಿವೃಷ್ಟಿಯಿಂದ ಹೆಸರು, ಕತ್ತಿ, ಈರುಳ್ಳಿ ಹೀಗೆ ಅನೇಕ ಬೆಳೆ ಹಾನಿಯಾಗಿವೆ. ರಾಜ್ಯ ಸರ್ಕಾರ ಪುಡಿಗಾಸು ಪರಿಹಾರ ನೀಡುವ ಮೂಲಕ ರೈತರ ಮೂಗಿಗೆ ತುಪ್ಪು ಹಚ್ಚುವ ಕೆಲಸ ಮಾಡಿದೆ ಬೆಳೆವಿಮಾ ಕಂಪನಿಗಳು ಸೂಕ್ತ ಪರಿಹಾರ ನೀಡಿಲ್ಲ. ಚುನಾವಣೆಗೆ ಹಾಗೂ ಪಾರ್ಟಿಗೆ ನೀಡುವ ವಿಮಾ ಕಂಪನಿಗಳಿಗೆ ಸರ್ಕಾರ ಲಾಭ ಮಾಡಿಕೊಡುವ ಮೂಲಕ ನಾಡಿನ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಕೃಷಿಗಾಗಿ ಮಾಡಿದ ಸಾಲ ತೀರಿಸಿದ ಅದೆಷ್ಟೋ ರೈತರು, ಸಾಲದ ಶೂಲದ ಕುಣಿಕೆಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದು ಖೇದಕರ. ಹೀಗಾಗಿ ಬರುವ ಕೇಂದ್ರ ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕಿಸಾನ್ ಸಮಾÁ್ಮನ್ ಯೋಜನೆಯಡಿ ನಾಲ್ಕು ತಿಂಗಳಿಗೊಮ್ಮ ನೀಡುವ 2,000 ರೂ. ಪ್ರತಿ ತಿಂಗಳು ನೀಡಬೇಕು. ಶೇ. 1ರ ಬಡ್ಡಿಯಂತೆ ರೈತರಿಗೆ 10 ಲಕ್ಷ ರೂ. ವರೆಗೆ ಸಾಲ ನೀಡಬೇಕು ಎಂದು ಹಣಕಾಸು ಸಚಿವರನ್ನು ಒತ್ತಾಯಿಸಿದರು.
ವಿಳಂಬ ಮಾಡದೆ ಕಡಲೆ ಖರೀದಿ ಕೇಂದ್ರ ತೆರೆದು, ಪ್ರತಿ ರೈತರಿಗೆ 25 ಕ್ವಿಂಟಲ್ ಕಡಲೆ ಖರೀದಿಸಬೇಕು ಎಂದು ಆಗ್ರಹಿಸಿದರು. ಚಂದ್ರಗೌಡ ದಸ್ತಿ, ರಾಚಯ್ಯ ಮಠದ, ಕಲ್ಲಪ್ಪ ಬುಮ್ಮನಗೌಡರ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net