ಹುಬ್ಬಳ್ಳಿ: ವಸತಿ ಸಮುಚ್ಛಯ ಹತ್ತಿರ ಅನುಮಾನಸ್ಪಾದವಾಗಿ ಓಡಾಡುತ್ತಿರುವುದನ್ನು ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬ delivery boy ಕಲ್ಲಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಕೇಶ್ವಾಪುರದ ಪೂರ್ವ ಸಂಚಾರಿ ಪೊಲೀಸ್ ಠಾಣೆ ಎದುರು ನಡೆದಿದೆ.
ಮುತ್ತಪ್ಪ ದೊಡ್ಡಮನಿ(43) ಎಂಬುವವರಿಗೆ ಖಾಸಗಿ ಕಂಪನಿಯೊಂದರ ಡೆಲಿವರಿ ಬಾಯ್ ಮಂಜುನಾಥ ಹಲ್ಲೆ ನಡೆಸಿದ್ದಾನೆ.
ಭಾನುವಾರ ಮಧ್ಯ ರಾತ್ರಿ 2 ಗಂಟೆಗೆ ವಸತಿ ಸಮುಚ್ಛಯ ಹತ್ತಿರ ಅಲೆದಾಡುತ್ತಿದ್ದ. ಇಷ್ಟೊತ್ತಿನಲ್ಲಿ ಯಾಕೆ ಬಂದಿರುವೆ ? ಎಂದು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಮುತ್ತಪ್ಪ ದೂರು ನೀಡಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.