deadly killer ಡೆಡ್ಲಿ ಕಿಲ್ಲರ್ ನೋಡಲು ಸಜ್ಜಾಗಿ

deadly killer ನಿರ್ದೇಶಕ ಥ್ರಿಲ್ಲರ್​ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
deadly killer ನಿರ್ದೇಶಕ ಥ್ರಿಲ್ಲರ್​ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜುಲೈ ೩ಕ್ಕೆ ರಾಜ್ಯಾದ್ಯಂತ ಬಿಡುಗಡೆ
  • ಹೊಸಬರಿಗೆ ಅವಕಾಶ ನೀಡಿದ ಹೆಗ್ಗಳಿಕೆ
ಹುಬ್ಬಳ್ಳಿ: deadly killer ಆ್ಯಕ್ಶನ್​, ಥ್ರಿಲ್ಲರ್​ ಹಾಗೂ ಕುತೂಹಲಭರಿತ ಮತ್ತು ಎಲ್ಲರೂ ಕುಟುಂಬ ಸಮೇತ ಕುಳಿತು ನೋಡಬಹುದಾದ ಡೆಡ್ಲಿ ಕಿಲ್ಲರ್​ ಚಿತ್ರ ಜುಲೈ 3ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಥ್ರಿಲ್ಲರ್​ ಮಂಜು ಹೇಳಿದರು.
ಹೊಸಬರಿಗೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಗುರಿ, ಒಳ್ಳೆಯ ಕಥೆಗಳಿರುವ ಸಿನಿಮಾ ಕನ್ನಡದಲ್ಲಿ ಬಹಳಷ್ಟು ಬಂದಿವೆ. ಆದರೆ, ಥೇಟರ್​ಗಳಲ್ಲಿ ಪಿಕ್​ಅಪ್​ ಆಗುವಷ್ಟರಲ್ಲಿ ತೆಗೆದು ಬಿಡುತ್ತಾರೆ. ಹೀಗಾದರೆ ಚಿತ್ರ ಹೇಗೆ ಓಡಬೇಕು ಎಂದು ಪ್ರಶ್ನಿಸಿದರು.
ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದರೆ ಸಹನೆಯೂ ಬೇಕು. ಸ್ಟಾರ್​ ಫಿಲ್ಮಗೆ ಆರಂಭದಲ್ಲೇ ಜನರು ನುಗ್ಗುತ್ತಾರೆ, ಹೊಸಬರ ಫಿಲ್ಮಗೆ ನಿಧಾನವಾಗಿ ಬರುತ್ತಾರೆ. ಹಾಗಾಗಿ ತಾಳ್ಮೆ ಬೇಕು ಎಂದರು.
ನಟ ಅಭಯವೀರ್​ ಮಾತನಾಡಿ, ಚಿತ್ರರಂಗ ದೊಡ್ಡ ಸಮುದ್ರ, ಇಲ್ಲಿ ಈಜಾಡಲು ಬೇಸಿಕ್​ ಸಪೋರ್ಟ್​ ಬೇಕಾಗುತ್ತದೆ. ಪ್ರೇಕ್ಷಕರು ಹಿರೋಗಳನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ಚಿತ್ರದಲ್ಲಿ ಆರು ಫೈಟ್ ಗಳಿವೆ. ಹೆಚ್ಚು ರಿಸ್ಕ್​ಗಳನ್ನು ತೆಗೆದುಕೊಂಡು ಸಿನೆಮಾ ಮಾಡಿದ್ದೇವೆ. ಹಾಗಾಗಿ ಚಿತ್ರ ಬಹಳಷ್ಟು ಉತ್ತಮವಾಗಿ ಮೂಡಿ ಬಂದಿದೆ. ಥ್ರಿಲ್ಲರ್​ ಮಂಜು ಅವರ ಸಿನೆಮಾದಲ್ಲಿ ಫೈಟ್ ಗೆ ಆದ್ಯತೆ ನೀಡಲಾಗಿರುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net