ಎನ್​ಸಿಸಿ (ncc) ಘಟಕಕ್ಕೆ ಡಿಡಿಜಿ ಭೇಟಿ

ಹುಬ್ಬಳ್ಳಿಯ 28 ಕರ್ನಾಟಕ (ncc) ಬಟಾಲಿಯನ್​ ಎನ್​ಸಿಸಿ ಘಟಕಕ್ಕೆ ಏರ್​ ಕಮೊಡೋರ್​ ಎಸ್​.ಬಿ. ಅರುಣಕುಮಾರ್​ ಭೇಟಿ ನೀಡಿದರು.
ಹುಬ್ಬಳ್ಳಿಯ 28 ಕರ್ನಾಟಕ (ncc) ಬಟಾಲಿಯನ್​ ಎನ್​ಸಿಸಿ ಘಟಕಕ್ಕೆ ಏರ್​ ಕಮೊಡೋರ್​ ಎಸ್​.ಬಿ. ಅರುಣಕುಮಾರ್​ ಭೇಟಿ ನೀಡಿದರು.
Published on
ಹುಬ್ಬಳ್ಳಿ: ಎನ್​ಸಿಸಿ ಕರ್ನಾಟಕ (ncc) ಮತ್ತು ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ (ಡಿಡಿಜಿ) ಏರ್​ ಕಾಮೊಡೋರ್​ ಎಸ್​.ಬಿ. ಅರುಣಕುಮಾರ್​ ಅವರು ಮಂಗಳವಾರ ಇಲ್ಲಿಯ 28 ಕರ್ನಾಟಕ ಬಟಾಲಿಯನ್​ ಎನ್​ಸಿಸಿ ಘಟಕಕ್ಕೆ ಭೇಟಿ ನೀಡಿದರು.
ಬೆಳಗಾವಿ ಗ್ರುಪ್​ ಕಮಾಂಡರ್​ ಅವರೊಂದಿಗೆ ಆಗಮಿಸಿದ ಡಿಡಿಜಿ ಅವರು, ಲೆಫ್ಟಿನೆಂಟ್​ ಕರ್ನಲ್​ ಜಸ್​ದೀಪ್​ ಸಿಂಗ್​ ಅವರ ನೇತೃತ್ವದ ಬಟಾಲಿಯನ್​ ಅನ್ನು ಸಮಗ್ರವಾಗಿ ಪರಿಶೀಲಿಸಿದರು. ಈ ಘಟಕಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಅವರು ಬಟಾಲಿಯನ್​ನ ಸಾಧನೆ ಮತ್ತು ನಿರಂತರ ಪ್ರಗತಿಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಸಮರ್ಪಣಾಭಾವ ಮತ್ತು ಶಿಸ್ತು ಎಂಬ ಮೌಲ್ಯಗಳಿಂದ ಸಾಧನೆ ಸಾಧ್ಯವಾಗುತ್ತದೆ. ಭವಿಷ್ಯದ ನಾಯಕರನ್ನು ರೂಪಿಸುವಲ್ಲಿ ಕಮಾಂಡಿಂಗ್​ ಅಧಿಕಾರಿಗಳು ಮತ್ತು ಸೂಚನಾ ಸಿಬ್ಬಂದಿ (ಪಿಐ ಸ್ಟಾಫ್​) ತೋರುತ್ತಿರುವ ನಿಸ್ವಾರ್ಥ ಸೇವೆ ಮತ್ತು ಪರಿಶ್ರಮವನ್ನು ಅರುಣಕುಮಾರ್​ ಪ್ರಶಂಸಿಸಿದರು.
ಅಸೋಸಿಯೇಟ್​ ಎನ್​ಸಿಸಿ ಅಧಿಕಾರಿಗಳು (ಎಎನ್​ಒ) ಮತ್ತು ಕೇರ್​ ಟೇಕರ್​ ಅಧಿಕಾರಿಗಳು (ಸಿಟಿಒ) ನೀಡುತ್ತಿರುವ ಸೇವೆಯು ಎನ್​ಸಿಸಿ ಕಂಪನಿಯ ಬೆನ್ನೆಲುಬು ಎಂದರು.
ಬಟಾಲಿಯನ್​ ಕಮಾಂಡಿಂಗ್​ ಅಧಿಕಾರಿ, ಆಡ್ಮಿನಿಸ್ಟ್ರೇಷನ್​ ಅಧಿಕಾರಿ, ಎಎನ್​ಒಗಳು, ಸಿಟಿಒಗಳು, ಸುಬೆದಾರ್​ ಮೇಜರ್​ ಮತ್ತು ಪಿಐ ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net