ಆಲಿಕಲ್ಲು ಮಳೆಯಿಂದ ಕಲಟಗಿ ತಾಲೂಕಿನ ಮಾಚಾಪುರ ಗ್ರಾಮ ಸುತ್ತಮುತ್ತ ಸುಮಾರು 5ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಜಾನುವಾರು ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಸ್ಥಳಿಯ ಅಧಿಕಾರಿಗಳು ಈಗಾಗಲೇ ಹಾನಿ ಪ್ರದೇಶ ಅಂದಾಜಿಸಿದ್ದಾರೆ. ಕಂದಾಯ, ಕಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು. ದೂರು ಬರದಂತೆ ಪಾರದರ್ಶಕ ಸಮೀಕ್ಷೆ ನಡೆಸಬೇಕು ಎಂದರು.