Dance ನೃತ್ಯಾರ್ಪಣ ಕಾರ್ಯಕ್ರಮ ಡಿ. 20ರಂದು

Dance ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಟ್ಯಾಂಜಲಿ ಕಲಾ ಮಂದಿರದ ಅಧ್ಯೆ ಸೌಭಾಗ್ಯ ಮಹಾಲೆ.
Dance ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಟ್ಯಾಂಜಲಿ ಕಲಾ ಮಂದಿರದ ಅಧ್ಯೆ ಸೌಭಾಗ್ಯ ಮಹಾಲೆ.
Published on

ಪ್ರಮುಖ ಮುಖ್ಯಾಂಶಗಳು

  • 21 ವಿಭಿನ್ನ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ.
  • ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜನರಿಗೆ ತಲುಪಿಸುವ ಉದ್ದೇಶ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಾಟ್ಯಾಂಜಲಿ ಕಲಾ ಮಂದಿರದ ಅಧ್ಯಕ್ಷೆ ಸೌಭಾಗ್ಯ ಮಹಾಲೆ, ಸುಮಾರು 250 ವಿದ್ಯಾರ್ಥಿಗಳು ಅಷ್ಟಲಕ್ಷಿ್ಮೕ ನೃತ್ಯ ರೂಪಕ ಸೇರಿದಂತೆ 21 ವಿಭಿನ್ನ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.
ಮಹಿಳಾ ವಿದ್ಯಾಪೀಠದ ಎಕ್ಸಿಕ್ಯೂಟಿವ್ ಚೇರ್ಮನ್ ಕೀರ್ತಿ ತೆಂಬದ ಉದ್ಘಾಟಿಸುವರು. ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸುವರು.
ಕನ್ನಡ ಮತ್ತು ಸಂಸೃ್ಕ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಥಕ್ ಮತ್ತು ಭರತನಾಟ್ಯ ಕಲಾವಿದೆ ಡಾ. ಸೀಮಾ ಉಪಾಧ್ಯಾಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ನಾಟ್ಯಾಂಜಲಿ ಕಲಾ ಮಂದಿರವು ನೃತ್ಯ ಕಲೆಯ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಕಲೆಯ ಅರಿವು, ಶಿಸ್ತು ಮೂಡಿಸಲು ಹಾಗೂ ನೃತ್ಯ ಪರಂಪರೆಯ ಗೌರವ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ನಾಟ್ಯಾಂಜಲಿ ಕಲಾ ಮಂದಿರದ ಸದಸ್ಯರಾದ ಆಶಾ ಪ್ರಭು, ಆಶಾ ಚವ್ಹಾಣ, ಭಾರತಿ ಭಟ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net