Dalit ದಲಿತ ಸಂಘರ್ಷ ಸಮಿತಿ ಸದಸ್ಯತ್ವ ಅಭಿಯಾನ

Dalit  ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ/
Dalit ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ/
Published on

ಪ್ರಮುಖ ಮುಖ್ಯಾಂಶಗಳು

  • 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿಗೆ ಅರ್ಹರು.
  • ಸಮಾನತೆಯ ಸಮಾಜ ನಿರ್ವಿುಸುವುದು ಸಂಘದ ಗುರಿಯಾಗಿದೆ.
  • ದಲಿತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಘಟಿತ ಶಕ್ತಿಯಾಗಿ ರೂಪಿಸುವ ಸಂಕಲ್ಪ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿಗೆ ಅರ್ಹರು. ದಲಿತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಘಟಿತ ಶಕ್ತಿಯಾಗಿ ರೂಪಿಸುವ ಸಂಕಲ್ಪ ಈ ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದು ಎಂದರು.
ಜಾತಿ ವ್ಯವಸ್ಥೆಯ ದಬ್ಬಾಳಿಕೆಯಿಂದ ಮುಕ್ತವಾದ ಗೌರವಯುತ ಮತ್ತು ಸಮಾನತೆಯ ಸಮಾಜ ನಿರ್ವಿುಸುವುದು ಸಂಘದ ಗುರಿಯಾಗಿದೆ ಎಂದರು.
ಈ ಮೊದಲು ದಲಿತ ಸಂಘರ್ಷ ಸಮಿತಿಯ ಹೋರಾಟದಿಂದ ತಾಲೂಕಿಗೆ ಒಂದರಂತೆ ವಸತಿ ಶಾಲೆಗಳು ತೆರೆಯಲ್ಪಟ್ಟಿದ್ದವು. ಇದೀಗ, ಮತ್ತೆ ಸಂಘಟನೆ ಮತ್ತು ಚಳವಳಿಯನ್ನು ಪುನರುಜ್ಜೀವನಗೊಳಿಸಬೇಕೆಂದರೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು ಎಂದರು.
ಡಾ. ಜಾನಕಮ್ಮ ನಾಗವಾರ, ಕ್ಯಾಲಸನಹಳ್ಳಿ ಶ್ರೀನಿವಾಸ, ಪ್ರೇಮ ವಸಂತ, ವೇದಾವತಿ ಕುಶಾಲಕುಮಾರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net