(cylinder) ಸಿಲಿಂಡರ್ ಸ್ಫೋಟದ ಅಧ್ಯಯನ ಅಗತ್ಯ

ಧಾರವಾಡದಲ್ಲಿ ಸಿಲಿಂಡರ್ (cylinder) ಸ್ಫೋಟದಿಂದ ಗಾಯಗೊಂಡು ಹುಬ್ಬಳ್ಳಿಯ ಕೆಎಂಸಿಆರ್ ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಕುರಿತು ಜಿಲ್ಲಾ ಉಸ್ತುವರಿ ಸಚಿವ ಸಂತೋಷ ಲಾಡ್, ವೈದ್ಯರಿಂದ ಮಾಹಿತಿ ಪಡೆದರು.
ಧಾರವಾಡದಲ್ಲಿ ಸಿಲಿಂಡರ್ (cylinder) ಸ್ಫೋಟದಿಂದ ಗಾಯಗೊಂಡು ಹುಬ್ಬಳ್ಳಿಯ ಕೆಎಂಸಿಆರ್ ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಕುರಿತು ಜಿಲ್ಲಾ ಉಸ್ತುವರಿ ಸಚಿವ ಸಂತೋಷ ಲಾಡ್, ವೈದ್ಯರಿಂದ ಮಾಹಿತಿ ಪಡೆದರು.
Published on
ಹುಬ್ಬಳ್ಳಿ: ಧಾರವಾಡ ಜನ್ನತ ನಗರದ ಮನೆಯೊಂದರಲ್ಲಿ ಸಿಲಿಂಡರ್ (cylinder) ಸ್ಫೋಟದಿಂದ ಗಾಯಗೊಂಡು ಇಲ್ಲಿಯ ಕೆಎಂಸಿಆರ್‌ಐನಲ್ಲಿ ದಾಖಲಾಗಿರುವವರ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ ಸೋರಿಕೆಯಾಗಿ ಅವಘಡ ಸಂಭವಿಸಿದೆ. ಆಫ್ರಿನ್ ಎಂಬುವವರಿಗೆ ಶೇ. 80ರಷ್ಟು ಸುಟ್ಟ ಗಾಯಗಳಾಗಿವೆ. ಉಳಿದವರೂ ಗಾಯಗೊಂಡಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್ ಸ್ಫೋಟ ಆಗುತ್ತಿರುವುದರ ಬಗ್ಗೆ ಅಧ್ಯಯನವಾಗಬೇಕಿದೆ. ಸಾರ್ವಜನಿಕರು ಅಡುಗೆ ಅನಿಲ ಬಳಸುವಾಗ ಎಚ್ವರಿಕೆ ವಹಿಸುವುದು ಅಗತ್ಯ ಎಂದರು.
ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು.ಸಚಿವರು ಗಾಯಾಳುಗಳ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾದಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ತಹಸೀಲ್ದಾರ್ ಮಹೇಶ ಗಸ್ತೆ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಆರ್‌ಎಂಒ ಡಾ. ರಾಜಶೇಖರ ದ್ಯಾಬೇರಿ, ಡಾ. ರವೀಂದ್ರ ಯಲಿಗಾರ, ಡಾ.ಎಸ್.ಎಸ್. ಶಿರೋಳ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net