ಇರ್ಫಾನ್ ಬ್ಯಾಂಕ್ ಪಾಸ್‌ಬುಕ್ ಅನ್ನು ಅರುಣ ಜಮಖಂಡಿ ಪಡೆದು ಸೈಬರ್ ಅಪರಾಧಗಳಿಗೆ ಬಳಕೆ ಮಾಡಿದ್ದ. ರಾಜ್ಯ ಸೈಬರ್ ಕಮಾಂಡ್ ಘಟಕ ನೀಡಿದ್ದ ವರದಿಯನ್ವಯ ಬೆನ್ನು ಬಿದ್ದ ಪೊಲೀಸರು, ಇಬ್ಬರನ್ನು ಮೊದಲು ವಿಚಾರಣೆ ನಡೆಸಿದ್ದರು. ಸೈಬರ್ ವಂಚನೆಯ ವರ್ಗಾವಣೆ ಹಣ ಮೂಲ ಖಾತೆದಾರರಿಗೆ ಸರಬರಾಜು ಆಗಿದ್ದರ ಕುರಿತು ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.