ಹುಬ್ಬಳ್ಳಿ: ನಗರದ ವ್ಯಕ್ತಿಯೊಬ್ಬರ ಶಾಪ್‌ನ ಮೊಬೈಲ್ ಮತ್ತು ವಾಟ್ಸ್‌ಆ್ಯಪ್ cyber fraud ನಂಬರ್ ಬಳಸಿಕೊಂಡ ಅಪರಿಚಿತರು, ಫೆಡರಲ್ ಬ್ಯಾಂಕ್‌ನಿಂದ ಇ-ಮೇಲ್ ಕಳುಹಿಸಿ 50 ಲಕ್ಷ ರೂ. ವರ್ಗಾವಣೆ ಮಾಡುವಂತೆ ಕೇಳಿಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಿತಿನ್ ಶರ್ಮಾ ವಂಚನೆಗೆ ಒಳಗಾದವರು.
ಜುಲೈ 16 ರಂದು ಅಪರಿಚಿತರು, ನಿತಿನ್ ಅವರ ಹೆಸರು ಮತ್ತು ಪೋಟೊ ಬಳಸಿಕೊಂಡು ಬ್ಯಾಂಕ್‌ನಿಂದ ಇ-ಮೇಲ್ ಕಳುಹಿಸಿ 50 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.