ಹವ್ಯಕ ಭವನದಲ್ಲಿ ಸಮಾವೇಶಗೊಂಡಿದ್ದ ಹವ್ಯಕ ಸಮುದಾಯದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಆಧುನಿಕ ಶಿಕ್ಷಣಕ್ಕೆ ಮಾತ್ರ ಮಹತ್ವ ನೀಡಿ ಸಂಸ್ಕಾರವನ್ನು ಕಡೆಗಣಿಸುತ್ತಿರುವುದರಿಂದ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿವೆ. ಸಂಸ್ಕಾರವಿಲ್ಲದ ಶಿಕ್ಷಣಕ್ಕೆ ನೈತಿಕ ಮೌಲ್ಯ ಇರುವುದಿಲ್ಲ ಎಂದರು.
ಹವ್ಯಕರಲ್ಲಿ ಉದ್ಭವಿಸಿದ ವೈವಾಹಿಕ ಸಮಸ್ಯೆಗಳಿಂದಾಗಿ ಅನೇಕ ಯುವಕರು ವಿವಾಹ ವಂಚಿತರಾಗಿ ಒಂಟಿ ಬಾಳನ್ನು ಬಾಳಬೇಕಾಗಿದೆ.
ಸಮಾಜದಲ್ಲಿ ವಿಚ್ಛೇದನಗಳಾಗುತ್ತಿರುವುದು ಆತಂತಕಾರಿಯಾಗಿದೆ. ಈ ಸಮಸ್ಯೆಗಳಿಗೆಲ್ಲ ಸೂಕ್ತ ಸಂಸ್ಕಾರದ ಅರಿವಿನ ಕೊರತೆಯೇ ಕಾರಣ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಸ್ವರ್ಣವಲ್ಲಿ ಮಠವು ಸಮಸ್ಯೆ ನಿವಾರಣೆಗೆ ಅನೇಕ ಪರಿಹಾರೋಪಾಯಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಮನುಷ್ಯ ತನ್ನಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚು ಅಳವಡಿಸಿಕೊಳ್ಳಲು ಮಠದ ಗುರುಗಳ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದು ತಿಳಿಸಿದರು.
ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಹೆಗಡೆ, ವಸಂತ ಭಟ್, ಜಿ.ಕೆ. ಹೆಗಡೆ, ಗೌರವ ಕಾರ್ಯದರ್ಶಿ ಸುದರ್ಶನ ಜಿ.ಎಚ್. ಹಾಗೂ ಇತರರಿದ್ದರು.