ಹಿಂಗಾರಿ ಬೆಳೆಗಳಲ್ಲಿ ಎಡೆಕುಂಟೆ ಭರಾಟೆ cultivation work

cultivation work
cultivation work
Published on
ಉಪ್ಪಿನಬೆಟಗೇರಿ (ಧಾರವಾಡ): ಅಮ್ಮಿನಬಾವಿ ಹಾಗೂ ಗರಗ ಹೋಬಳಿ ವ್ಯಾಪ್ತಿಯಲ್ಲಿ ಹಿಂಗಾರು ಬೆಳೆಗಳಲ್ಲಿನ ಕಳೆ ನಾಶಕ್ಕೆ ರೈತರು ಎಡೆಕುಂಟೆ cultivation work in rabi crops began ಹೊಡೆಯುತ್ತಿದ್ದಾರೆ.
ಹಿಂಗಾರಿನ ಕಡಲೆ, ಜೋಳ, ಗೋಧಿ, ಕುಸುಬೆ ಬಹುತೇಕ ಬೆಳೆಗಳು ಹವಾಮಾನ ಆಧಾರಿತವಾಗಿವೆ. ಕೆಲ ದಿನಗಳಿಂದ ಬಿಡುತ್ತಿರುವ ಶೀತಮಯ ವಾತಾವರಣ ಬೆಳೆಗಳಿಗೆ ಪೂರಕವಾಗಿದ್ದು, ಬೆಳೆಗಳು ದಿನದಿಂದ ದಿನಕ್ಕೆ ಬದಲಾವಣೆ ಕಂಡುಬರುತ್ತಿವೆ. ಟ್ರ್ಯಾಕ್ಟರ್ ಹಾಗೂ ಜೋಡೆತ್ತುಗಳ ಮೂಲಕ ಎಡೆಕುಂಟೆ ಹೊಡೆಯುವ ಕೆಲಸ ಜೋರಾಗಿದೆ.
ಕಳೆದ ವರ್ಷ 2 ಸಾವಿರ ರೂಪಾಯಿ ಇದ್ದ ಎತ್ತಿನ ದಿನದ ಬಾಡಿಗೆ, ಈ ಬಾರಿ 2500 ರೂ.ಗೆ ಏರಿಕೆ ಕಂಡಿದೆ. ಕಾರ್ಮಿಕರಿಗೆ 400 ರೂ. ದಿನಗೂಲಿ ಇದೆ. ನಾಲ್ಕು ಜನ ಸೇರಿ ದಿನವೊಂದಕ್ಕೆ ಎತ್ತಿನ ಗಳೆಯಿಂದ 4 ಎಕರೆ ಎಡೆಕುಂಟೆ ಹೊಡೆಯಬಹುದಾಗಿದೆ. ಟ್ರ್ಯಾಕ್ಟರ್ ಮೂಲಕ ಎಡೆಕುಂಟೆಗೆ ಹೊಡೆಯಲು ವೆಚ್ಚ ಕಡಿಮೆ ಇದ್ದರೂ, ಬೆಳೆಗಳಿಗೆ ಹಾನಿ ಆಗುತ್ತಿರುವ ಕಾರಣ ರೈತರು ಜೋಡೆತ್ತುಗಳಿಗೆ ಆದ್ಯತೆ ನೀಡುವಂತಾಗಿದೆ. ಇದು ಹೊಲ ಜಾಸ್ತಿ ಇರುವ ರೈತರಿಗೆ ಅನುಕೂಲ ಆಗಿದ್ದರೂ ಸಣ್ಣ ಹಿಡುವಳಿದಾರರಿಗೆ ಇದು ಹೊರೆಯಾಗಿ ಪರಿಣಮಿಸಿದೆ.
ಪರ್ಯಾಯ ಮಾರ್ಗ: ಎತ್ತು, ಟ್ರಾೃಕ್ಟರ್‌ಗಳಿಂದ ಎಡೆಕುಂಟೆ ಸಾಧ್ಯವಾಗದ ಸಣ್ಣ ರೈತರು ಇದೀಗ ಸಣ್ಣ ಯಂತ್ರದ ಮೊರೆ ಹೋಗಿದ್ದಾರೆ. ಸೈಕಲ್ ಗಾಲಿ ಬಳಸಿ ಮಾಡಿದ ಹಾಗೂ ಸಣ್ಣ ಕಬ್ಬಿನ ಪಟ್ಟಿ ಹಾಗೂ ಸರಳುಗಳಿಂದ ಮಾಡಿದ ಉಪಕರಣವನ್ನು ಎಡೆಕುಂಟೆಯಾಗಿ ಬಳಸುತ್ತಿದ್ದಾರೆ. ಕಡಿಮೆ ವೆಚ್ಚದ ಈ ಸಲಕರಣೆಗಳಿಂದ ರೈತರ ಕೆಲಸವು ಸರಳವಾಗಿದೆ. ರೈತರು ಇಷ್ಟಪಟ್ಟು ದಿನವೀಡಿ ಕೆಲಸ ಮಾಡುವಂತಾಗಿದೆ.
ಕಡಲೆ ಬಿತ್ತನೆ ಅಧಿಕ: ಅಮ್ಮಿನಬಾವಿ ಹೋಬಳಿ ಮಟ್ಟದಲ್ಲಿ 26125 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಗೋಧಿ 1495, ಜೋಳ 2380, ಕಡಲೆ 22 ಸಾವಿರ ಹಾಗೂ ಕುಸುಬೆ 250 ಹೆಕ್ಟೇರ್ ಬಿತ್ತನೆಯಾಗಿದೆ. ಗರಗ ಹೋಬಳಿಯಲ್ಲಿ ಜೋಳ 2450, ಮೆಕ್ಕೆಜೋಳ 1450, ಗೋಧಿ 450, ಕಡಲೆ 6250, ಹತ್ತಿ 25 ಹೆಕ್ಟೇರ್ ಸೇರಿ ಒಟ್ಟು 10860 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರೈತರು ಕಡಲೆಗೆ ಆದ್ಯತೆ ಕೊಟ್ಟಿದ್ದು, ಹೀಗಾಗಿ ಅಮ್ಮಿನಬಾವಿ ಹಾಗೂ ಗರಗ ಹೋಬಳಿಯಲ್ಲಿ ಒಟ್ಟು 28250 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬಿತ್ತನೆ ಆಗಿ ಗುರಿ ದಾಟಿದೆ. ನಂತರದ ಸ್ಥಾದಲ್ಲಿ ಜೋಳ, ಗೋಧಿ, ಕುಸುಬೆ ಬೆಳೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net