ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಿ

ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳುವಳಿಯ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳುವಳಿಯ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on
ಧಾರವಾಡ: ವಿದ್ಯಾಥಿರ್ಗಳು ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಧಾರವಾಡ ನಿವೃತ್ತ ನೌಕರರ ಸಹಕಾರಿ ಸಂದ ಅಧ್ಯ ಗುರು ತಿಗಡಿ ಕಿವಿಮಾತು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂದ ಮಹಿಳಾ ಮತ್ತು ಮಕ್ಕಳ ಮಂಟಪದಿಂದ ತಾಲೂಕಿನ ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳುವಳಿಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವುದು ಇಂದಿನ ಸಂಕ್ರಮಣ ಕಾಲದಲ್ಲಿ ಅತಿ ಅವಶ್ಯಕ. ವಿದ್ಯಾಥಿರ್ಗಳು ರಾಷ್ಟ್ರಾಭಿಮಾನ ಬೆಳೆಸಿಕೊಂಡು ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯಬೇಕು ಎಂದರು.
ಅಧ್ಯತೆ ವಹಿಸಿದ್ದ ವೀರಭದ್ರಯ್ಯ ಚಿಕ್ಕಮಠ ಮಾತನಾಡಿ, ವಿದ್ಯಾಥಿರ್ಗಳೆಲ್ಲ ದೇಶದ ಪ್ರಗತಿಗಾಗಿ ದುಡಿಯಬೇಕು ಎಂದು ಹೇಳಿದರು. ಡಾ ವಿ. ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ "ದೇಶಭಕ್ತಿ ಗೀತೆ, ನಾ ಮೆಚ್ಚಿದ ಸ್ವಾತಂತ್ರ್ಯ ಹೋರಾಟಗಾರ' ಕುರಿತು ಭಾಷಣ ಸ್ಪರ್ಧೆ ನಡೆದವು. ಸ್ಪರ್ಧೆಯಲ್ಲಿ 25ಕ್ಕಿಂತ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು.
ಡಾ. ಅರುಣಾ ಹಳ್ಳಿಕೇರಿ, ಶಶಿಕಲಾ ಶಾಸ್ತ್ರಿಮಠ, ಗೀತಾ ಗಾಣಿಗೇರ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಪಿಡಿಒ ಶಕುಂತಲಾ ಭಜಂತ್ರಿ ಇತರರಿದ್ದರು. ಶಾಲೆಯ ಮಕ್ಕಳು ಪ್ರಾಥಿರ್ಸಿದರು. ಮಹಿಳಾ ಮತ್ತು ಮಕ್ಕಳ ಮಂಟಪ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ ಎಲ್​.ಐ. ಲಕ್ಕಮ್ಮನವರ ಪರಿಚಯಿಸಿದರು. ಕಮಲಾ ಕೋಟೂರ ನಿರೂಪಿಸಿದರು. ಶ್ರೀನಿವಾಸ ಶೆಟ್ಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net