ಧಾರವಾಡ: ಇಲ್ಲಿನ ಸಿಎಸ್‌ಐ ( CSI College) ಕಾಲೇಜ್ ಕಾಮರ್ಸ್‌ನ 1999- 2002ನೇ ಇಸ್ವಿಯ ಬಿ.ಕಾಂ ಬ್ಯಾಚಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಮೇ 2ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದೆ. ಪ್ರಾಚಾರ್ಯೆ ಡಾ. ಕಮಲಾ ಡವಳೆ ಉದ್ಘಾಟಿಸುವರು. ಆ ಬ್ಯಾಚಿನ ಶಿಕ್ಷಕರನ್ನು ಹಳೇ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಗುರುವಂದನಾ ಸಮಿತಿಯ ಪ್ರಭು ಕೊಂಗಿ ಮತ್ತು ಶಿವಲಿಂಗ ಸೋಲಾರಗೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.