ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರುಷರ 14, 16 ಹಾಗೂ 19 ವಯೋಮಿತಿಗಳ ವಿಭಾಗದಲ್ಲಿ ತಲಾ 25ರಂತೆ 75 ಆಟಗಾರರನ್ನು ಮತ್ತು ಮಹಿಳೆಯರ 15 ಹಾಗೂ 19 ವಯೋಮಿತಿಗಳ ವಿಭಾಗದಲ್ಲಿ ತಲಾ 25ರಂತೆ 50 ಆಟಗಾರ್ತಿಯರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಕಾರವಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಶಿಬಿರಾರ್ಥಿಗಳಿಗೆ ದೇಶಪಾಂಡೆನಗರ ಕರ್ನಾಟಕ ಜಿಮ್ಖಾನ್ ಕ್ಲಬ್ ಹಾಗೂ ಖಾಸಗಿ ಹೋಟೆಲ್ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.