ಹುಬ್ಬಳ್ಳಿ: craft ನಗರದ ಉಣಕಲ್ಲ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ನಲ್ಲಿ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾದ ಸೂಜಿ ಮತ್ತು ದಾರವನ್ನು ಬಳಸಿ ಬಟ್ಟೆಯ ಮೇಲೆ ವೈವಿಧ್ಯಮಯ ವಿನ್ಯಾಸಗಳನ್ನು ಬಿಡಿಸುವ ಕಲೆ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಮಧುವಂತಿ ಹುಯಿಲಗೋಳ, ಕರ್ನಲ್ ಮೋಹನ್ ಮಠ, ತಿಮ್ಮಾಪುರ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಸಹ ಸಂಯೋಜಕರಾದ ರೇಣುಕಾ ಬಗಲಿ, ನೀಲಂ ನಾಗಡಾ ಉಪಸ್ಥಿತರಿದ್ದರು.
ಮಧುವಂತಿ ಹುಯಿಲಗೋಳ ಅವರು ಮಾತನಾಡಿ, ಯಾಂತ್ರಿಕ ಜಗತ್ತಿನಲ್ಲಿ ಕೈಯಿಂದ ಮಾಡುವ ಕಸೂತಿ ಕಲೆಗೆ ಅಪಾರ ಬೇಡಿಕೆ ಇದೆ. ಈ ಕಲೆಗೆ ಜೀವ ತುಂಬಲು ನಾವೆಲ್ಲರೂ ದೇಶಿ ನಿರ್ಮಿತ ಕಸೂತಿ ಉತ್ಪನ್ನಗಳನ್ನು ಬಳಸುವ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಕಾರ್ಯಾಗಾರದಲ್ಲಿ ಆರು ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಬಟ್ಟೆಯ ಮೇಲೆ ಸೂಜಿ ದಾರದಿಂದ ಚಿತ್ತಾರವನ್ನು ಬಿಡಿಸಿ, ಸುಂದರ ಕಲೆ ನೋಡಿ ಸಂಭ್ರಮಪಟ್ಟರು.