

"ಸುಮಾರು 23 ಕೋಟಿ ರೂಪಾಯಿ ಹಣಕಾಸು ವಂಚನೆ ಮಾಡಿರುವ ದಂಪತಿ ನಮ್ಮ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಕುರಿತು ನ. 20ರಂದು ಸಂಜೆ 5ಕ್ಕೆ ತೆಲಂಗಾಣದಿ೦ದ ಮಾಹಿತಿ ಬಂದಿತ್ತು. ಆರೋಪಿಗಳ ಚಲನವಲದ ಕುರಿತು ವೈಜ್ಞಾನಿಕ ಸಾಕ್ಷ್ಯಗಳನ್ನು ಕಳುಹಿಸಿದ್ದರು. ಅದರ ಅನ್ವಯ 3 ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಕಿ ತಪಾಸಣೆ ಮಾಡಲಾಗಿತ್ತು. ಇವರಿಬ್ಬರೂ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಆರೋಪಿಗಳಾಗಿದ್ದು, ಜಾಗ ಬದಲಾಯಿಸುತ್ತ ಪೊಲೀಸರ ಕೈಗೆ ಸಿಗದೆ ಸಂಚರಿಸುತ್ತಿದ್ದರು. ರಾಮದುರ್ಗ ಕಡೆ ಹೊರಟಿದ್ದ ಇಬ್ಬರನ್ನೂ ವಶಕ್ಕೆ ಪಡೆದು ತೆಲಂಗಾಣ ಸೆಂಟ್ರಲ್ ಕ್ರೈ೦ ಸ್ಟೇಷನ್ ಪೊಲೀಸರ ಸುಪರ್ದಿಗೆ ನೀಡಲಾಗಿದೆ.
— ಗುಂಜನ್ ಆರ್ಯ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ