ಧಾರವಾಡ: ಕನಸು ಕೇವಲ ನಿದ್ದೆಯಲ್ಲಿ ಮಾತ್ರ ಕಾಣುವುದಲ್ಲ. ಅದನ್ನು ನನಸಾಗಿಸಿಕೊಳ್ಳುವ ಸತತ ಪ್ರಯತ್ನ ವಿದ್ಯಾರ್ಥಿಗಳದ್ದಾಗಿರಬೇಕು ಎಂದು ವಿದ್ಯಾ ಪಿ. ಹಂಚಿನಮನಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಾಜು ಕಡೆಮನಿ ಹೇಳಿದರು.
ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ವರ್ಷದ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಸಂಸ್ಥಾಪಕ ಪ್ರೊ. ಪಿ.ಆರ್. ಹಂಚಿನಮನಿ, ವರ್ಷ ಮನೋಜ ಹಂಚಿನಮನಿ, ಸತೀಶ ನಾಯಕ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.