ಕಾಂಗ್ರೆಸ್ ವರ್ತನೆ ಮುಸ್ಲಿಂ ಲೀಗ್​ನಂತಿದೆ behavior

behavior ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
behavior ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
Published on
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಹೋರಾಟಗಾರರು, ಕನ್ನಡಪರ ಹೋರಾಟಗಾರರ ನೆಪವನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ 52 ಪ್ರಕರಣಗಳನ್ನು ಹಿಂಪಡೆದಿದೆ. ಈ ಪ್ರಕರಣಗಳಲ್ಲಿ ಹೆಚ್ಚು ಇಸ್ಲಾಮಿಕ್ ಮತಾಂಧರರು ಇದ್ದಾರೆ ಎಂದು ದೂರಿದರು.
ಕೋಮು ಗಲಭೆ ಸೃಷ್ಟಿಸಿದವರು, ಮತಾಂತರ ಸೇರಿ ಗಂಭೀರ ಆರೋಪ ಎದುರಿಸುತ್ತಿರುವರು ಈ 52 ಪ್ರಕರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬೆರಳೆಣಿಕೆಯಷ್ಟು ಮಾತ್ರ ಹಿಂದು ಹಾಗೂ ಕನ್ನಡಪರ ಹೋರಾಟಗಾರರು ಮತ್ತು ಪ್ರಚೋದನಾತ್ಮಕ ಭಾಷಣ ಮಾಡಿದವರು ಇದ್ದಾರೆ ಎಂದು ತಿಳಿಸಿದರು.
ತುಷ್ಟೀಕರಣದ ನೀತಿಯಿಂದಾಗಿಯೇ ಕಾಂಗ್ರೆಸ್ ಇಡೀ ದೇಶದಲ್ಲಿ ನಿರ್ನಾಮಗೊಳ್ಳುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ, ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಮಾಡಿದವರ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಲು ಮುಂದಾದಾಗ ಬಿಜೆಪಿ ನ್ಯಾಯಾಲಯದ ಮೆಟ್ಟಿಲು ಏರಿತ್ತು.
ಈಗಲೂ ಸಹ ಸರ್ಕಾರದ ಈ ನಿರ್ಧಾರ ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದರು.
ಸೋಲಿನ ಭಯ : ಕಾಂಗ್ರೆಸ್​ಗೆ ಮುಂದಿನ ಚುನಾವಣೆಯ ಬಗ್ಗೆ ಸೋಲಿನ ಭಯ ಹೆಚ್ಚಾಗಿದೆ. ಅದಕ್ಕಾಗಿಯೇ, ರಾಜ್ಯದಲ್ಲಿ ಎಸ್​ಐಆರ್​ಗೆ ವಿರೋಧಿಸುತ್ತಿದೆ. ಎಸ್​ಐಆರ್​ಗೆ ಕೇರಳದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.
ದೇಶದ ಅನೇಕ ಹಿರಿಯ ನಾಯಕರು ಎಸ್​ಐಆರ್ ಅನ್ನು ಸ್ವಾಗತಿಸುತ್ತಿದ್ದಾರೆ. ಆದರೆ, ಎಸ್​ಐಆರ್​ನಿಂದಾಗಿ ತನ್ನ ಪೊಳ್ಳು ಮತದಾರರ ಪಟ್ಟಿ ಮಾಯವಾಗಿ ಸೋಲನುಭವಿಸಬೇಕಾಗಬಹುದು ಎಂಬ ಭೀತಿ ಕಾಂಗ್ರೆಸ್ ಅನ್ನು ಕಾಡುತ್ತಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಆ ಪಕ್ಷದ ಇನ್ನಿತರ ನಾಯಕರು ಸಹ ರಾಹುಲ್ ಗಾಂಧಿಯಂತೆ ವರ್ತಿಸುತ್ತಿದ್ದಾರೆ.
ಕಾಂಗ್ರೆಸ್ ಹಳೇಯ ರಾಜಕೀಯ ಪಕ್ಷ. ಆ ಪಕ್ಷದಲ್ಲಿ ಅನೇಕ ಬುದ್ಧಿ ಜೀವಿಗಳು, ಜ್ಞಾನಿಗಳು ಇದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯನ್ನು ಒಲಿಸುವ ಉದ್ದೇಶದಿಂದ ಆ ಪಕ್ಷದ ಮುಖಂಡರು ಅವರಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜನರ ಹಣ ಲೂಟಿ ಮಾಡುತ್ತಿರುವ ಸರ್ಕಾರ : ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನೆ ಪೆಟ್ರೋಲ್ ಹಾಗೂ ಡೀಸೆಲ್ ಸುಂಕವನ್ನು ಏರಿಸಿದೆ. ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಕಾಳಜಿ ಇದ್ದಿದ್ದರೆ ಸುಂಕ ಏರಿಕೆ ಮಾಡಬಾರದಾಗಿತ್ತು ಎಂದು ಪ್ರಲ್ಹಾದ ಜೋಶಿ ಹೇಳಿದರು.
ಪೆಟ್ರೋಲ್ ಸುಂಕದಲ್ಲಿ ಕೇಂದ್ರ ಸರ್ಕಾರದ್ದು ಕೇವಲ 3 ರೂ. ಇದ್ದರೆ, ರಾಜ್ಯ ಸರ್ಕಾರದ್ದು 27 ರೂ. ಇದೆ. ಡೀಸೆಲ್ ದರದಲ್ಲಿ ಕೇಂದ್ರ ಸರ್ಕಾರ ಯಾವುದೇ ಶುಲ್ಕ ಹೇರಿಲ್ಲ. ಆದರೆ, ರಾಜ್ಯ ಸರ್ಕಾರ 14 ರೂ. ಸುಂಕ ಆಕರಿಸುತ್ತಿದೆ. ರಾಜ್ಯ ಸರ್ಕಾರ ಪೆಟ್ರೋಲ್ ದರದಲ್ಲಿನ ತನ್ನ ಸುಂಕವನ್ನು ಇಳಿಕೆ ಮಾಡಲಿ ಎಂದು ಒತ್ತಾಯಿಸಿದರು.
ದೇಶದಲ್ಲಿ ಇಂಧನದ ಕೊರತೆ ಇಲ್ಲ. ಅಮೇರಿಕೆಯಲ್ಲಿ ಇಂಧನ ದರ ಶೇ. 50ಕ್ಕೆ ಏರಿಕೆಯಾಗಿದ್ದರೆ, ಚೀನಾದಲ್ಲಿ ಶೇ. 30ರಷ್ಟು ಏರಿಕೆಯಾಗಿದೆ ಎಂದರು.
ದೇಶ ಕಠಿಣ ಪರಿಸ್ಥಿತಿಯಲ್ಲಿ ಇದ್ದಾಗ ರಾಜ್ಯ ಸರ್ಕಾರಗಳು ದೇಶದ ಆಡಳಿತದಲ್ಲಿ ಸಹಕಾರ ನೀಡಬೇಕು. ಆದರೆ, ಸಿದ್ದರಾಮಯ್ಯ ಸರ್ಕಾರ ಈ ದುಸ್ಥಿತಿಯಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಲೂಟಿ ಮಾಡುತ್ತಿದೆ. ಇದೊಂದು ದರೋಡೆಕೋರ ಸರ್ಕಾರ ಎಂದು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net